ಬೆಂಗಳೂರು: ಭಾನುವಾರ ರಾತ್ರಿ ಸುರಿದ ಪೂರ್ವ ಮುಂಗಾರು ಮಳೆಗೆ ಉದ್ಯಾನ ನಗರಿ ಅಕ್ಷರಶ: ನಲುಗಿದೆ. ವರುಣಾರ್ಭಟದಿಂದ ನಾಗರಿಕರು ಇದೇನಾ ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರೇಟರ್ ಬೆಂಗಳೂರು ಎಂದು ಬದಲಾಗಿರುವ ರಾಜಧಾನಿಯಲ್ಲಿ ಪ್ರತೀ ಬಾರಿ ಮಳೆ ಸುರಿದಾಗಲೆಲ್ಲ ಮನೆಗಳಿಗೆ ನೀರು ನುಗ್ಗುವುದು, ರಸ್ತೆಯಲ್ಲಿ ನೀರು ನಿಲ್ಲುವುದು ಸಾಮಾನ್ಯ ಎಂಬಂತಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಎಡತಾಕುವ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ಧಾರೆ. ಗೃಹ …
Read More »ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಬ್ಬೂರ ಪಟ್ಟಣದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ವಿವಿಧ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಿದರು. ಈ ವೇಳೆ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ,ಮುಖಂಡರಾದ ಶ್ರೀ ಮಹಾವೀರ ಮೊಹಿತೆ, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಕಾಮಗಾರಿಗಳ ವಿವರಗಳು. 1. ಸನ್ 2024-25ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ …
Read More »ರಂಗ ಸೃಷ್ಟಿಯಿಂದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ
ರಂಗ ಸೃಷ್ಟಿಯಿಂದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ಬೆಳಗಾವಿ : ಹೇಮರಡ್ಡಿ ಮಲ್ಲಮ್ಮ ನಾಟಕವನ್ನು ಅತ್ಯಂತ ಯಶಸ್ವಿಯಾಗಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ರಂಗಸೃಷ್ಟಿ ತಂಡದ ಕಲಾವಿದರಿಗೆ ಕೃತಜ್ಞತೆ ಸಮರ್ಪಣೆ ಕಾರ್ಯಕ್ರಮ ಈಚೆಗೆ ನಡೆಯಿತು. ಬೆಳಗಾವಿಯ ಸ್ಕೌಟ್ಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಕಲಾವಿದರಿಗೆ ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್ ಅವರು ಮಾತನಾಡಿ, ನಿರೀಕ್ಷೆಗೂ ಮೀರಿ ನಾಟಕ ಯಶಸ್ವಿಯಾಗಿದೆ. ಸಭಾಭವನ ಕಿಕ್ಕಿರಿದು ತುಂಬಿದ್ದರಿಂದ ನೂರಾರು ಜನರು ವಾಪಸ್ ಹೋಗಬೇಕಾಯಿತು. …
Read More »ಹುಬ್ಬಳ್ಳಿ – ಧಾರವಾಡದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳು ತನಿಖೆಯಿಂದ ಪತ್ತೆ: ಎನ್ ಶಶಿಕುಮಾರ್
ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡದ ಎರಡು ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳು ಸೂರತ್ ಮೂಲದವರು ಅನ್ನೋದು ತನಿಖೆಯಿಂದ ಪತ್ತೆಯಾಗಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಎನ್ ಶಶಿಕುಮಾರ್ ತಿಳಿಸಿದರು. ಅವಳಿ ನಗರದ ಕೆಲ ಪ್ರಾರ್ಥನಾ ಮಂದಿರಗಳಲ್ಲಿ ಅಪರಿಚಿತರ ಓಡಾಟ ಹೆಚ್ಚಾಗುತ್ತಿದ್ದು, ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಸಕ ಅರವಿಂದ ಬೆಲ್ಲದ್ ಬರೆದ ಪತ್ರದ ವಿಚಾರ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.ಹುಬ್ಬಳ್ಳಿ – ಧಾರವಾಡ ನಗರ …
Read More »ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಹಕ್ಕುಪತ್ರ ವಿತರಣೆ ಮಾಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ಬೆಳಗಾವಿ: ಮೇ 30 ರ ಒಳಗಾಗಿ ಬೈಲಹೊಂಗಲ ಪಟ್ಟಣದ ಹರಳಯ್ಯಾ ಕಾಲನಿ (ಮಚಗಾರ ಗಲ್ಲಿ) ನಿವಾಸಿಗಳ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು. ಇಂದು ಬೆಳಗಾವಿಯ ಹನುಮಾನ ನಗರದಲ್ಲಿ ಇರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮುಂದೆ ಧರಣಿ ನಡೆಸಲಾಯಿತು. ಸುಮಾರು 50 ವರ್ಷಗಳಿಂದ ದಲಿತ ಸಮಾಜದವರು ಹಾಗೂ ಅಲ್ಪ ಸಂಖ್ಯಾತರು …
Read More »ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ,ಚಿಕ್ಕೋಡಿಯಲ್ಲಿ ಬೃಹತ್ ತಿರಂಗಾ ರ್ಯಾಲಿ
ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ,ಚಿಕ್ಕೋಡಿಯಲ್ಲಿ ಬೃಹತ್ ತಿರಂಗಾ ರ್ಯಾಲಿ ಚಿಕ್ಕೋಡಿ: ಪಹಲಾಗಮ್ ಉಗ್ರರ ದಾಳಿಗೆ ಪ್ರತಿಯಾಗಿ,ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಬೃಹತ್ ತಿರಂಗಾ ರ್ಯಾಲಿ ನಡೆಯಿತು. ತಿರಂಗಾ ರ್ಯಾಲಿಯ ಮೂಲಕ ಸೇನೆಗೆ ಬೆಂಬಲವನ್ನು ಸೂಚಿಸಲಾಯಿತು.ಸಾವಿರ ಮೀಟರ್ ಉದ್ದದ ರಾಷ್ಟ್ರ ಧ್ವಜ ಹಿಡಿದು ಚಿಕ್ಕೋಡಿ ಪಟ್ಟಣದಾದ್ಯಂದತ ಮೇರವಣಿಗೆ ನಡೆಯಿತು.ತಿರಂಗಾ ರ್ಯಾಲಿಯು ಆರ್.ಡಿ.ಕಾಲೇಜು ಮೈದಾನದಿಂದ ಗಾಂಧಿ ಕಟ್ಟೆಯ ವರೆಗೆ ಜರುಗಿತು. ಈ ಸಂಧರ್ಭದಲ್ಲಿ ಸಂಪದನಾ ಸ್ವಾಮೀಜಿ,ವೀರಭದ್ರೇಶ್ವರ ಸ್ವಾಮೀಜಿ,ಶೃಧ್ದಾನಂದಾ …
Read More »ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ
ಶಿವಮೊಗ್ಗ: ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ನಡೆದಿದೆ. ವಾಕಿಂಗ್ ಹೋಗಿದ್ದ ಹೇಮಣ್ಣ ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಮಂಜು ಎಂಬಾತನ ಬಂಧನಕ್ಕೆ ಹೊಳೆ ಹೊನ್ನೂರು ಪೊಲೀಸರು ತೆರಳಿದ್ದರು. ಈ ವೇಳೆ, ಆತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಆತನ ಕಾಲಿಗೆ ಗುಂಡೇಟು ಹೊಡೆದು ಹಿಡಿದಿದ್ದಾರೆ. ಮೇ 9 ರಂದು …
Read More »ಲಕ್ಷ್ಮೀ ಹೆಬ್ಬಾಳ್ಕರ್ಗೆ ಅವಾಚ್ಯ ಪದ ಬಳಕೆ ಆರೋಪ: ಸಿ.ಟಿ ರವಿಗೆ ಬಿಗ್ ರಿಲೀಫ್
ನವದೆಹಲಿ, (ಮೇ 19): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ (Lakshmi Hebbalkar) ಅವಾಚ್ಯ ಪದದಿಂದ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ವಿರುದ್ಧ ಪ್ರಕರಣಕ್ಕೆ ಸುಪ್ರೀಂಕೋರ್ಟ್ (supreme court) ತಡೆಯಾಜ್ಞೆ ನೀಡಿದೆ. ಬೆಳಗಾವಿ ಅಧಿವೇಶನದ (Belagavi Session) ವೇಳೆ ಅವಾಚ್ಯ ಪದದಿಂದ ನಿಂದನೆ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ದೂರು ನೀಡಿದ್ದರು. ಆದ್ರೆ, ಈ ದೂರು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ …
Read More »ಬೆಂಗಳೂರಿನ ವರುಣಾರ್ಭಟಕ್ಕೆ ಮೊದಲ ಬಲಿ
ಬೆಂಗಳೂರು, ಮೇ 19: ನಗರದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಸುರಿದ ಮಳೆ (rain) ಹಲವು ಅನಾಹುತಗಳನ್ನು ಸೃಷ್ಟಿಸಿದೆ. ನಿನ್ನೆ ತಡರಾತ್ರಿ ಕೂಡ ಮಳೆ ಆರ್ಭಟಿಸಿದ್ದು, ವರ್ಷದ ಮೊದಲ ಬಲಿ (death) ಪಡೆದುಕೊಂಡಿದೆ. ರಣ ರಕ್ಕಸ ಮಳೆಗೆ ಗೋಡೆ ಕುಸಿದು 35 ವರ್ಷದ ಮಹಿಳೆಯೋರ್ವರು ಪ್ರಾಣಬಿಟ್ಟಿದ್ದಾರೆ. ನಗರದ ವೈಟ್ ಫೀಲ್ಡ್ನ ಚನ್ನಸಂದ್ರದಲ್ಲಿ ದುರಂತ ಸಂಭವಿಸಿದೆ. ಖಾಸಗಿ ಕಂಪನಿಯ ಉದ್ಯೋಗಿ ಶಶಿಕಲಾ(35) ಮೃತ ಮಹಿಳೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿದ್ದಾರೆ. ವೈಟ್ ಫೀಲ್ಡ್ …
Read More »ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ವಾಗ್ದಾಳಿ: ಕರ್ನಾಟಕ ಲೂಟಿ ಕಾಂಗ್ರೆಸ್ ಡ್ಯೂಟಿ ಪೊಸ್ಟರ್ ಬಿಡುಗಡೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ವಾಗ್ದಾಳಿ: ಕರ್ನಾಟಕ ಲೂಟಿ ಕಾಂಗ್ರೆಸ್ ಡ್ಯೂಟಿ ಪೊಸ್ಟರ್ ಬಿಡುಗಡೆ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಕೆ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು ಕರ್ನಾಟಕ ಲೂಟಿ ಕಾಂಗ್ರೆಸ್ ಡ್ಯೂಟಿ ಎಂಬ ಬರಹದ ಪೋಸ್ಟರ್ ಬಿಡುಗಡೆ ಮಾಡಿದರು. ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆ ಬಿಡುಗಡೆ ಮಾಡಿದ ಬಿಜೆಪಿ ಮುಖಂಡರು …
Read More »