Breaking News

21 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ, ಹುಕ್ಕಾ ಬಾರ್ ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿ ಅಂಕಿತ

ಬೆಂಗಳೂರು: 21 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಹಾಗೂ ಹುಕ್ಕಾ ಬಾರ್ ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ) (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024ಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಮಸೂದೆ ಫೆಬ್ರವರಿ 2024ರಂದು ಉಭಯ ಸದನಗಳಲ್ಲಿ ಅಂಗೀಕಾರವಾಗಿತ್ತು. 2003ರ ಕೇಂದ್ರ ಕಾಯ್ದೆಯನ್ನು …

Read More »

ಸರ್ಕಾರಿ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಶಿಕ್ಷಕನನ್ನು ಅಮಾನತುಗೊಳಿಸಿ ಬಿಇಒ ಆದೇಶ

ಬೆಳಗಾವಿ: ಸರ್ಕಾರಿ ಶಾಲೆಗೆ ತರಗತಿ ಕೊಠಡಿಗಳ ಮಂಜೂರಾತಿಗೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಶಿಕ್ಷಕನನ್ನು ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಅಮಾನತುಗೊಳಿಸಿರುವ ಘಟನೆ ರಾಯಬಾಗದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅಮಾನತುಗೊಂಡವರು. ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 146 ವಿದ್ಯಾರ್ಥಿಗಳಿದ್ದರೂ ಅಗತ್ಯ ಕೊಠಡಿಗಳಿಲ್ಲ. ಹಾಗಾಗಿ, ಮಕ್ಕಳ ಸಂಖ್ಯೆ ಅನುಸಾರ ಕೊಠಡಿಗಳ ಮಂಜೂರಾತಿ ಮಾಡುವಂತೆ ಮಂಗಳವಾರ ಶಾಲೆಯ …

Read More »

ಪರೀಕ್ಷೆ ಬರೆದು ಒಂದೇ ಗಂಟೆಯಲ್ಲಿ 50 ಸಾವಿರ ವಿದ್ಯಾರ್ಥಿಗಳ ಫಲಿತಾಂಶ:VTU RESULT RECORD

ಬೆಳಗಾವಿ: ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಪ್ರಕಟಿಸುವ ಮೂಲಕ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಹೊಸ ಇತಿಹಾಸ ನಿರ್ಮಿಸಿದೆ. ಮೇ 30ರಂದು ಅಂತಿಮ ಸೆಮಿಸ್ಟರ್‌ನ 50,321 ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ಕೇವಲ ಒಂದು ಗಂಟೆಯ ನಂತರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ ‌ಎಂದು ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದ್ದಾರೆ. ಕಳೆದ ವರ್ಷ ಮೂರು ಗಂಟೆಯಲ್ಲಿ ಫಲಿತಾಂಶ ಪ್ರಕಟ: ಕಳೆದ ಬಾರಿ ಮೂರು …

Read More »

ಜೆಡಿಎಸ್ ನಿಂದ ಬೆಂಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನ್ಮದಿನ; ಜೆಡಿಎಸ್ ನಿಂದ ಬೆಂಗಳೂರಿನಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ಬೆಂಗಳೂರು: ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಹೆಚ್.ಡಿ. ದೇವೇಗೌಡ ಅವರ 93ನೇ ಜನ್ಮದಿನದ ಹಿನ್ನೆಲೆಯಲ್ಲಿ ನಗರ ಜೆಡಿಎಸ್ ಘಟಕದ ವತಿಯಿಂದ ಆರು ಕಿ.ಮೀ.ಗೂ ಹೆಚ್ಚು ದೂರ ಬೃಹತ್ ಕ್ಯಾನ್ಸರ್ ಜಾಗೃತಿ ಜಾಥಾ ವನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಜಿ ಪ್ರಧಾನಮಂತ್ರಿಗಳ …

Read More »

ಬೆಳಗಾವಿಯಲ್ಲಿ ಫೈರ್ ಫ್ರೈಡೆ…!!! ಒಂದೇ ದಿನ 2 ಕಡೆ ಬೆಂಕಿ ಅವಘಡ..!! ಸದಾಶಿವನಗರ ವಿಜಯ್ ಬೇಕರಿಯಲ್ಲಿಯೂ ಬೆಂಕಿ ಅವಘಡ

ಬೆಳಗಾವಿಯಲ್ಲಿ ಫೈರ್ ಫ್ರೈಡೆ…!!! ಒಂದೇ ದಿನ 2 ಕಡೆ ಬೆಂಕಿ ಅವಘಡ..!! ಸದಾಶಿವನಗರ ವಿಜಯ್ ಬೇಕರಿಯಲ್ಲಿಯೂ ಬೆಂಕಿ ಅವಘಡ ಅಗ್ನಿಶಾಮಕದಳದಿಂದ ಸ್ಪಂದನೆ ಸಿಗದಿದ್ದಕ್ಕೆ ಬೇಕರಿ ಮಾಲೀಕರ ಅಸಮಾಧಾನ ಬೆಳಗಾವಿಯಲ್ಲಿ ಶುಕ್ರವಾರ ಬೆಳಗಿನ ಜಾವ ಬಹುಶಃ ಅಗ್ನಿದೇವ ವಕ್ರದೃಷ್ಠಿ ಬೀರಿದ್ದಾನೆ. ನಗರದ ಕಾಂದಾ ಮಾರ್ಕೇಟ್’ನಲ್ಲಿ ಬೆಂಕಿ ಅವಘಡಕ್ಕೆ 2 ಅಂಗಡಿಗಳು ಬೆಂಕಿಗಾಹುತಿಯಾದರೇ, ಬೆಳಗಾವಿಯ ಸದಾಶಿವನಗರದಲ್ಲಿರುವ ವಿಜಯ್ ಬೇಕರಿಯಲ್ಲಿಯೂ ಕೂಡ ಅಗ್ನಿ ಅವಘಡ ಸಂಭವಿಸಿದೆ. ಬೆಳಗಾವಿಯ ಸದಾಶಿವನಗರ ಸೆಕೆಂಡ್ ಕ್ರಾಸ್ ಬಳಿಯಿರುವ ವಿಜಯ್ …

Read More »

ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು..

ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು…. ಬೈಲಹೊಂಗಲ ತಾಲೂಕಿನಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಗೋಕಾಕ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ 27 ಅಡಿವಪ್ಪ ಲಕ್ಷ್ಮಣ್ ಸಿಂತಮನಿ 28 ರಾಜು ಶೆಟ್ಟಿಪ್ಪ ನಾಯ್ಕ 26 ಸಿದ್ದಪ್ಪ ಶಿವಪ್ಪ ಚಿಕ್ಕೊಪ್ಪದವರ 20 ಪರಪ್ಪ ಬಸಪ್ಪ ಕಡ್ಲಿ 21 ಬಂಧಿತ ಆರೋಪಿಗಳು ಬಂದಿತ …

Read More »

ಕಾಳಸಂತೆಯಲ್ಲಿ IPL ಟಿಕೆಟ್ ಮಾರಾಟಕ್ಕೆ ಕುಮ್ಮಕ್ಕು

ಬೆಂಗಳೂರು: ಆರ್​ಸಿಬಿ ಹಾಗೂ ಕೋಲ್ಕತ್ತಾ ನಡುವಿನ ಐಪಿಎಲ್ ಪಂದ್ಯಕ್ಕೆ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡಲು ನೆರವು ನೀಡಿದ್ದ ಇಬ್ಬರು ಟ್ರಾಫಿಕ್ ಕಾನ್​ಸ್ಟೇಬಲ್​ಗಳನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶಿಸಿದ್ದಾರೆ. ಹಲಸೂರು ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿಚಂದ್ರ ಹಾಗೂ ಸಂಚಾರ ನಿರ್ವಹಣಾ ಕೇಂದ್ರದಲ್ಲಿ(ಟಿಎಂಸಿ) ಕೆಲಸ ಮಾಡುತ್ತಿರುವ ವೆಂಕಟಗಿರಿ ಗೌಡ ಎಂಬವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ …

Read More »

ಹುಬ್ಬಳ್ಳಿ-ಧಾರವಾಡ ತ್ಯಾಜ್ಯ ಸಂಸ್ಕರಣಾ ಘಟಕ ಇನ್ನು ಖಾಸಗಿ ತೆಕ್ಕೆಗೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬೆಳೆದಂತೆಲ್ಲ, ಮಹಾನಗರ ಪಾಲಿಕೆಗೆ ಕಸ ಸಂಗ್ರಹಣೆ ಹಾಗೂ ಸಂಸ್ಕರಣೆ ದೊಡ್ಡ ತಲೆನೋವಾಗಿದೆ. ಅವಳಿ ನಗರದಲ್ಲಿ‌ ನಿತ್ಯ ನೂರಾರು ಟನ್ ಕಸ ಸಂಗ್ರಹವಾಗುತ್ತಿದ್ದು, ವಿಲೇವಾರಿ ಮಾಡಲು ಪಾಲಿಕೆ ಹೊಸ ಉಪಾಯಕ್ಕೆ ಕೈ ಹಾಕಿದೆ. ಅಂದಿನ ಕಸ ಅಂದೇ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ಹು-ಧಾ ಪಾಲಿಕೆ ನಿರ್ಧರಿಸಿದೆ‌. ಇದು ಮೊದಲ ಪ್ರಯತ್ನವಾಗಿದೆ. ಅವಳಿ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಯೇ ಇಲ್ಲ. ಹೀಗಾಗಿ ರಾಶಿ ಕಸದ ಗುಡ್ಡೆ …

Read More »

ಖ್ಯಾತ ಸಾಹಿತಿ, ಗೀತ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ನಿಧನ

ಬೆಂಗಳೂರು : ಖ್ಯಾತ ಸಾಹಿತಿ, ಗೀತರಚನೆ ಹಾಗೂ ಸಂಭಾಷಣೆಕಾರ ಡಾ.ಹೆಚ್​​​.ಎಸ್​​​​.ವೆಂಕಟೇಶಮೂರ್ತಿ (80) ಅವರು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅನೇಕ ಚಿತ್ರಗಳಿಗೆ ಹಾಡುಗಳು, ಕಥೆ ಮತ್ತು ಸಂಭಾಷಣೆ ಬರೆದಿದ್ದ ಅವರು 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವೆಂಕಟೇಶ ಮೂರ್ತಿಯವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ್ದ ವೆಂಕಟೇಶಮೂರ್ತಿಯವರು ಕರ್ನಾಟಕ …

Read More »

My Wife Reason For My Death ಎಂದು ಡೆ*ತ್ ನೋಟ್ ಬರೆದಿಟ್ಟು ಆತ್ಮಹತ್ಯೆ

My Wife Reason For My Deat*h* ಎಂದು ಡೆ*ತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಹೆಂಡತಿ ಕಾಟಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಬೆಳಗಾವಿಯ ಅನಗೋಳದ ಶಿವಶಕ್ತಿ ಕಾಲನಿಯಲ್ಲಿ ಘಟನೆ *My Wife Reason For My Dea*th* ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಸುನೀಲ ಮೂಲಿಮನಿ (33) ಆತ್ಮಹ*ತ್ಯೆಗೆ ಶರಣಾದ ದುರ್ದೈವಿ ಸುನೀಲ ಮೂಲಿಮನಿ, ಬೆಳಗಾವಿಯ ಅನಗೋಳದ ಶ್ರೀರಾಮ ಕಾಲನಿ‌ ನಿವಾಸಿ ಪತ್ನಿ- ಪುತ್ರಿ ಜೊತೆಗೆ …

Read More »