Breaking News

ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಗೋವಾ ಪೊಲೀಸ

ಬೆಳಗಾವಿ: ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಘಟನೆ ನಡೆದಿದ್ದು ಗೋವಾ ಪೊಲೀಸರ ವರ್ತನೆ ಖಂಡಿಸಿ ರೈಲ್ವೆ ಹಳಿಯ ಮೇಲೆ ಕುಳಿತು ಪ್ರವಾಸಿಗರ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ- ಗೋವಾ ಗಡಿಭಾಗದಲ್ಲಿರುವ ದೂಧ್ ಸಾಗರ ಜಲಪಾತ ಘಟನೆ ನಡೆದಿದ್ದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ದೂದ್ ಸಾಗರ ನೋಡಲು ಜನಸಾಗರವೇ ಆಗಮಿಸಿದೆ. ಪ್ರವಾಸಿಗರು ಬರುತ್ತಿದ್ದಂತೆ ದೂಧ್ ಸಾಗರ ಪ್ರವೇಶಕ್ಕೆ ನಿಷೇಧವನ್ನು ಗೋವಾದ ಪೊಲೀಸರು ಹೇರಿದ್ದಾರೆ.ದೂದಸಾಗರದಲ್ಲಿ ಆಳವಾದ …

Read More »

ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆ ಜತ್ ಪಟ್ಟಣದಲ್ಲಿ ಬೃಹತ್ ಹೋರಾಟ

ಮುಂಗಾರು ಮಳೆ ವಿಫಲ ಹಿನ್ನಲೆ, ಕುಡಿಯೋ ನೀರು ಜಾನುವಾರುಗಳ ಮೇವಿಗಾಗಿ ಪ್ರತಿಭಟನೆ ನಡೆಸಿರುವ ಘಟನೆ ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಜಿಲ್ಲೆ ಜತ್ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಸಲಾಯಿತು. ಜತ್ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಕ್ರಮ್ ದಾದಾ ಸಾವಂತ್ ನೇತೃತ್ವದಲ್ಲಿ ಹೋರಾಟ ನಡೆಯಿತು. ಮಹಾರಾಷ್ಟ್ರ ಸರ್ಕಾರ ಕುಡಿಯೋ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕದ ಗಡಿ ಭಾಗದ ಗ್ರಾಮಗಳಿಗೆ ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಎಂದು ಆರೋಪಿಸಿದರು. …

Read More »

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು: ಬೊಮ್ಮಾಯಿ

ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ ಎಂಬ ವದಂತಿ ಹಬ್ಬುತ್ತಿದೆ. ಈ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿನಿ, ಈ ಹಿಂದೆ ಎಲ್ಲರೂ ಬಳೆ ಹಾಕಿಕೊಂಡು ಕೆಲಸ ಮಾಡಿದಾರೆ. ಅಂದು ಯಾವ ತೊಂದರೆ ಆಗಿಲ್ಲಾ. ಸರ್ಕಾರಕ್ಕೆ ಮಾಡಲು ಬೇರೆ …

Read More »

ಹಿಂಡಲಗಾ ಜೈಲಿನಲ್ಲಿದ್ದ ಶಂಕಿತ ಉಗ್ರನನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು

ಬೆಳಗಾವಿ: ಇಲ್ಲಿನ ಹಿಂಡಲಗಾ ಜೈಲಿನಿಂದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಕೈದಿ ಜಯೇಶ್​ ಪೂಜಾರಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಬೆದರಿಕೆಗೆ ಪ್ರಚೋದನೆ ನೀಡಿದ ಆರೋಪದಡಿ ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆ ನಂಟು ಹೊಂದಿದ್ದ ಶಂಕಿತ ಉಗ್ರ‌ ಅಫ್ಸರ್ ಪಾಷಾನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ಹಿಂಡಲಗಾ ಜೈಲಿಗೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಅಫ್ಸರ್ ಪಾಷಾನನ್ನು …

Read More »

ಜೈನ ಮುನಿ ಮಹಾರಾಜರ ಕನಸುಗಳನ್ನು ಪೂರ್ಣ ಮಾಡುತ್ತೇವೆ: ಸಂಸದ ಅಣ್ಣಾಸಾಹೇಬ್ ಜೊಲ್ಲೆ

ಚಿಕ್ಕೋಡಿ (ಬೆಳಗಾವಿ) : ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆಘಾತ ಉಂಟು ಮಾಡಿದೆ. ಹಿರೇಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಉತ್ತಮ ಆಶ್ರಮ ಕಟ್ಟಿ, ಶಿಕ್ಷಣ ಸಂಸ್ಥೆ ಮಾಡಿದರು. ಮುಂದೆ ಅವರು ಬಿಟ್ಟು ಹೋದ ಕನಸುಗಳನ್ನು ಪೂರ್ಣ ಮಾಡುತ್ತೇವೆ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು. ಇಂದು ಜೈನಮುನಿ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಕುಮಾರ ನಂದಿ ಮಹಾರಾಜರು ಬಿಇ ಪದವೀಧರ ಆಗಿದ್ದು, 14 ಭಾಷೆಗಳಲ್ಲಿ ಪರಿಣಿತರಾಗಿದ್ದರು. …

Read More »

75 ಗಂಟೆಗಳಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ

ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್​ನಲ್ಲಿ ಸಿಂಹಿಣಿಯೊಂದು ಐದು ಮರಿಗಳು ಜನ್ಮ ನೀಡಿದೆ. ಈ ಪೈಕಿ ನಾಲ್ಕು ಮರಿಗಳು ಮೃತಪಟ್ಟಿವೆ. ಆದರೆ, ಇದೇ ಮೊದಲ ಬಾರಿ ಈ ಸಿಂಹಿಣಿ ಸುಮಾರು ಗಂಟೆಗಳ ಅಂತರದಲ್ಲಿ ಐದು ಮರಿಗಳಿಗೆ ಜನ್ಮ ನೀಡಿರುವುದು ವನ್ಯಜೀವಿ ಮತ್ತು ಅರಣ್ಯ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಆದ್ದರಿಂದ ಈ ಸಿಂಹಿಣಿ ಬಗ್ಗೆ ಅಧ್ಯಯನ ಮಾಡಲು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಮಿತಿಯನ್ನು ರಚಿಸಿದೆ. ಇಟಾವಾ ಲಯನ್ ಸಫಾರಿ …

Read More »

ಹಂಪಿಯಲ್ಲಿ ಶೆರ್ಪಾಗಳಿಂದ ಯೋಗಾಭ್ಯಾಸ,

ವಿಜಯನಗರ: ಜಿ20 ಸಭೆಗೆ ಆಗಮಿಸಿರುವ ಶೆರ್ಪಾಗಳಿಗೆ ವಿಶ್ವವಿಖ್ಯಾತ ಹಂಪಿಯ ಪುರಂದರದಾಸರ ಮಂಟಪದಲ್ಲಿ ಇಂದು ಬೆಳಗ್ಗೆ ಯೋಗಾಭ್ಯಾಸ ಮಾಡಿಸಲಾಯಿತು. ಜಿ20 ಸಭೆಯಲ್ಲಿ ಭಾಗಿಯಾದ ಶೆರ್ಪಾಗಳು ಇಂದು ಬೆಳಗ್ಗೆ ವಿಶ್ವಪಾರಂಪರಿಕ ತಾಣ ಹಂಪಿಗೆ ಭೇಟಿ ನೀಡಿದ್ದರು. ಸೂರ್ಯೋದಯಕ್ಕೂ ಮುನ್ನ ತುಂಗಭದ್ರಾ ನದಿ ದಡದಲ್ಲಿರುವ ಪುರಂದರ ಮಂಟಪದಲ್ಲಿ ಯೋಗಾಭ್ಯಾಸ ಮಾಡಿದರು. ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ …

Read More »

ಕೆಸರು ಗದ್ದೆಯಲ್ಲಿ ಆಟವಾಡಿ ಸಂತಸಪಟ್ಟ ಭಾವಿ ವೈದ್ಯರು

ದಾವಣಗೆರೆ: ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ. ಹೀಗಾಗಿ ಸದಾ ಕಾಲೇಜು, ಪರೀಕ್ಷೆ, ಪ್ರಾಜೆಕ್ಟ್​ ವರ್ಕ್​ ಎಂದು ಬ್ಯೂಸಿಯಾಗಿರುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು, ಮಳೆಗಾಲದ ಮೋಡ ಮುಸುಕಿದ ವಾತಾವರಣದಲ್ಲಿ ಕೆಸರು ಗದ್ದೆ ಓಟ, ಹಗ್ಗ- ಜಗ್ಗಾಟ ಸೇರಿದಂತೆ ಹಲವು ದೇಸಿ ಕ್ರೀಡೆಗಳನ್ನು ಆಡುವ ಮೂಲಕ ಸಖತ್​ ಎಂಜಾಯ್​ ಮಾಡಿದರು.​​ ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ಜೆಜೆಎಂ ಕಾಲೇಜು ವಿದ್ಯಾರ್ಥಿಗಳು …

Read More »

ಬೆಂಗಳೂರು – ಮೈಸೂರು ಹೈವೇಯ ದುಪ್ಪಟ್ಟು ಟೋಲ್ ವಿರೋಧಿಸಿ ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ

ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ದುಪ್ಪಟ್ಟು ಟೋಲ್ ವಸೂಲಿ ವಿರೋಧಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಪ್ರತಿಭಟನೆ ನಡೆಸಿತು. ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ ನೇತೃತ್ವದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ನೂರಾರು ಜನ ಕಾರ್ಯಕರ್ತರು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಬಳಿ ಪ್ರತಿಭಟನೆ ನಡೆಸಿದ್ದಾರೆ‌. ಸಾರ್ವಜನಿಕರ ತೆರಿಗೆ ಹಣದಿಂದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆದರೂ ಅದನ್ನ ಬಳಸಲು ದುಪ್ಪಟ್ಟು …

Read More »

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ತೊಂದರೆ

ಬೆಂಗಳೂರು: ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೂ ತೊಂದರೆ ಎದುರಾಗಿದೆ. ತರಕಾರಿ ಹಾಗೂ ನಿತ್ಯ ಬಳಸುವ ವಸ್ತುಗಳು ಆಗಸಕ್ಕೇರಿದ ಹಿನ್ನೆಲೆ ತರಕಾರಿ ಖರೀದಿಗೆ ಹಿಂದೆ ಮುಂದೆ ಯೋಚಿಸುವ ಪರಿಸ್ಥಿತಿ ಬಂದಿದೆ. ದುಬಾರಿ ಬೆಲೆ ಕಾರಣ ಶಾಲಾ ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ ಎದುರಾಗಿದೆ. ಅಂಗನವಾಡಿ ಕೇಂದ್ರಗಳು‌ ನೀಡುತ್ತಿರುವ ಊಟದಲ್ಲಿ ತರಕಾರಿ ತುಂಡುಗಳೇ ನಾಪತ್ತೆ ಆಗುತ್ತಿದೆ. ಅಂಗನವಾಡಿ ಕೇಂದ್ರಗಳು ಬರಿ ಅನ್ನ ಮತ್ತು ತಿಳಿಸಾರು ಮೊರೆ ಹೋಗುತ್ತಿದ್ದಾರೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಟಿಕ …

Read More »