ನವದೆಹಲಿ: ಭಾರತಕ್ಕೆ ಮೊಬೈಲ್ ಕಂಪನಿಗಳು ಲಗ್ಗೆ ಇಡಲು ಸಜ್ಜಾಗಿವೆ. 11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಉತ್ಪಾದನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಮುಂದಿನ ಐದು ವರ್ಷದಲ್ಲಿ 22 ದೇಶಿ ಮತ್ತು ವಿದೇಶಿ ಕಂಪನಿಗಳು ಭಾರತದಲ್ಲಿ 11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳನ್ನು ಉತ್ಪಾದಿಸುವ ಪ್ರಸ್ತಾಪ ಮಾಡಿರುವುದಾಗಿ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಸ್ಯಾಮ್ಸಂಗ್, ರೈಸಿಂಗ್ ಸ್ಟಾರ್, ಫಾಕ್ಸ್ ಕಾರ್ನ್ ಮೊದಲಾದ ಅಂತಾರಾಷ್ಟ್ರೀಯ ಕಂಪನಿಗಳು, ಲಾವಾ, ಮೈಕ್ರೋಮ್ಯಾಕ್ಸ್ ಸೇರಿದಂತೆ ಹಲವು ಭಾರತೀಯ ಕಂಪನಿಗಳು ಭಾರಿ ಪ್ರಮಾಣದಲ್ಲಿ ಸ್ಮಾರ್ಟ್ಫೋನ್ ತಯಾರಿಸಲು ಸಜ್ಜಾಗಿವೆ. ಜಾಗತಿಕ ಮೊಬೈಲ್ ಉತ್ಪಾದನಾ ತಾಣವಾಗುವ ದಾರಿಯಲ್ಲಿ ಭಾರತ ಸಾಗುತ್ತಿದೆ. ಪ್ರಸ್ತಾವನೆ ಜಾರಿಯಾದರೆ 12 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ.