ಮೂಡಲಗಿ: ಕೊರೊನಾ ಸೋಂಕು ವಿರುದ್ದ ಹೋರಾಡುತ್ತಿರುವ ಪವರ್ ಮ್ಯಾನ್ ಸಿಬ್ಬಂದಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಬೆಂಬಲಿಗರು ಹಣ್ಣು, ಹಾಗೂ ಮಾಸ್ಕ್ ಗಳನ್ನು ವಿತರಿಸಿದರು.
ಇಲ್ಲಿನ ಕೆಇಬಿ ಕಚೇರಿಯಲ್ಲಿ ಕೆಲಸ ನಿರ್ವಹಿಸಿತ್ತಿರುವ ಸಿಬ್ಬಂದಿಗಳಿಗಾಗಿ ಶಾಸಕ ಸತೀಶ ಜಾರಕಿಹೊಳಿ ಅಗತ್ಯವಸ್ತುಗಳನ್ನು ಕಳುಹಿಸಿಕೊಟ್ಟಿದ್ದು, ಅವರ ಬೆಂಬಲಿಗರು ಬಂದು ವಿತರಿಸಿದರು.
ಇದೇ ವೇಳೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಿದ್ರು.
ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ಮುರಳಿ ಬಡಿಗೇರ, ಶಾಖಾಧಿಕಾರಿಗಳಾದ
ಸಿ.ಬಿ.ವಂಟಗುಡಿ,ಆರ್.ಡಿ.ಪಿಡಾಯಿ. ಆರ್.ಬಿ.ಬಾಗೇವಾಡಿ. ಎಂ.ಎ.ಶೇಖಬಡೆ . ಹಾಗೂ ಎಲ್ಲ ಸಿಬ್ಬಂದಿಗಳು ಹಾಜರಿದ್ದರು.