ಹನೂರು: ಪ್ರಪಂಚವು ಇಂದು ಕೊರೋನೊ ಎಂಬ ಮಹಾಮಾರಿಯಿಂದ ತತ್ತರಿಸಿರುವಾಗ ನಮ್ಮ ದೇಶದ ಜನ ಸಂಕಷ್ಟದಲ್ಲಿದ್ದಾರೆ ಇವರಿಗೆ ನರೇಗಾ ಯೋಜನೆ ಸಂಜೀವಿನಿಯಾಗಿದ್ದು ಬಡ ಕುಟುಂಬಗಳ ನಿವಾ೯ಹಣೆಗೆ ಸಹಕಾರಿಯಾಗಿದೆ. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಚಾ.ನಗರ ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರ ಶ್ರೀ ಮಲೈ ಮಹದೇಶ್ವರಬೆಟ್ಟ ಮಾದಪ್ಪನ ಸನ್ನಿಧಿಗೆ ಬೇಟಿ ನೀಡಿ ದಶ೯ನ ಮಾಡಿದ ಅವರು ಮ.ಬೆಟ್ಠ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ನರೇಗಾ ಕಾಮಾಗಾರಿ ವೀಕ್ಷಣೆ ಮಾಡಿ ರಸ್ತೆ ಬದಿ ವ್ಯಾಪಾರಿಗೆ ಜಾಬ್ ಕಾಡ್೯ ವಿತರಣೆ ಮಾಡಿ ಮಾತನಾಡಿದರು.
ಕೋವಿಡ್-19 ಲಾಕ್ ಡೌನ್ ಸಂಧಭ೯ಧಲ್ಲಿ ಕೂಲಿ ಕಾಮಿ೯ಕರು ರಸ್ತೆ ಬದಿ ವ್ಯಾಪಾರಿಗಳು ಮತ್ತುಇನ್ನಿತರ ವೃತ್ತಿ ನಿವಾ೯ಹಕರಿಗೆ ನರೇಗಾ ಯೋಜನೆ ಬದುಕಿಗೆ ಆಸೆರೆಯಾಗಿದೆ. ಮತ್ತು ಕೆರೆ ಕಟ್ಟೆ ಮತ್ತು ಚೆಕ್ ಡ್ಯಾಂ ಹೂಳು ತೆಗೆಯುವುದು ಜಮೀನು ಅಭಿವೃದ್ದಿ ಮತ್ತು ಬದು ನಿಮಾ೯ಣ ಇನ್ನಿತರ ಕೆಲಸಗಳು ಗ್ರಾಮಾಬಿವೃದ್ದಿಗೆ ಪೂರಕವಾಗದೆ ಎಂದರು.
ಈ ವೇಳೆ ಶಾಸಕ ಆರ್.ನರೇಂದ್ರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಮಾನಸ ಫೌಂಡೇಷನ್ ಮುಖ್ಯಸ್ಥರು ಆದ ಡಾ: ಎಸ್.ದತ್ತೇಶ್ ಕುಮಾರ್ ವಕೀಲರಾದ ರಂಗಸ್ವಾಮಿ ಜಿ.ಪಂ ಸಿಇಒ ಬಿ.ಹೆಚ್.ನಾರಾಯಣ್ ರಾವ್ ಇಒಡಾ# ಪ್ರಕಾಶ್ ಪಿಡಿಒ ರಾಜಕುಮಾರ್ ಗ್ರಾ.ಪಂ.ಅಧ್ಯಕ್ಷೆ ರುಕ್ಮಣಿ ಉಪಾಧ್ಯಕ್ಷ ಮಹೇಶ್ ಪ್ರಾಧಿಕಾರ ಕಾಯ೯ದಶಿ೯ ಜಯವಿಭವಸ್ವಾಮಿ ಉಪ ಕಾಯ೯ದಶಿ೯ ಬಸವರಾಜು ಇನ್ನಿತರರು ಹಾಜರಿದ್ದರು.