Breaking News

ನೇಮಕಾತಿ ಮಾಡಿಕೊಳ್ಳಲು ವೈದ್ಯರು ಬರುತ್ತಿಲ್ಲ, ವೇತನ ಹೆಚ್ಚಿಸಿ: ಪಾಲಿಕೆ

Spread the love

ಬೆಂಗಳೂರು: ಬೆಂಗಳೂರಲ್ಲಿ ಕೊರೋನಾ ಚಿಕಿತ್ಸಾ ಕಾರ್ಯಕ್ಕೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುವ ಸೂಚಿಸಿರುವ ವೈದ್ಯರು ಹಾಗೂ ಇತರೆ ಸಿಬ್ಬಂದಿಯ ಸಂಭಾವನೆ ಹೆಚ್ಚಳ ಮಾಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ನಗರದಲ್ಲಿ ಕೊರೋನಾ ಚಿಕಿತ್ಸೆಗೆ ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ 300 ವೈದ್ಯರು, 600 ನರ್ಸ್‌ಗಳು ಸೇರಿ 1700 ವೈದ್ಯಕೀಯ ಸಿಬ್ಬಂದಿ ಹಾಗೂ ಡಿ ಗ್ರೂಪ್‌ ನೌಕರರನ್ನು 6 ತಿಂಗಳ ಅವಧಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿಗದಿತ ಮೊತ್ತದ ವೇತನ ಗೊತ್ತುಪಡಿಸಿ ಅನುಮತಿ ನೀಡಿತ್ತು. ಅದರಂತೆ ಸಂದರ್ಶನ ಮೂಲಕ ಬಿಬಿಎಂಪಿ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದರೂ ಹೆಚ್ಚಿನ ಅಭ್ಯರ್ಥಿಗಳು ನೇಮಕಾತಿಗೆ ಬರುತ್ತಿಲ್ಲ. ಹಾಗಾಗಿ ಪಾಲಿಕೆ ಅವರ ಸಂಭಾವನೆಯನ್ನು ಇನ್ನಷ್ಟುಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದೆ. ಬೆಸ್ಕಾಂ 8 ಸಿಬ್ಬಂದಿಗೆ ಸೋಂಕು, 1912 ಸಹಾಯವಾಣಿ ಸಿಗಲ್ಲ, ಈ ನಂಬರ್‌ಗೆ ವಾಟ್ಸಾಪ್ ಮಾಡಿ

ಎಂಬಿಬಿಎಸ್‌ ವೈದ್ಯರಿಗೆ ಸರ್ಕಾರ ನಿಗದಿಪಡಿಸಿರುವ .60 ಸಾವಿರ ಮಾಸಿಕ ಸಂಭಾವನೆಯನ್ನು .80 ಸಾವಿರ, ಬಿಡಿಎಸ್‌/ಆಯುಷ್‌ ವೈದ್ಯರಿಗೆ ನಿಗದಿಪಡಿಸಿರುವ .45 ಸಾವಿರ ಸಂಭಾವನೆಯನ್ನು .60 ಸಾವಿರ, ಶುಶ್ರೂಷಕರಿಗಿರುವ .20 ಸಾವಿರ ಸಂಭಾವನೆಯನ್ನು .30 ಸಾವಿರಗಳಿಗೆ, ಸಹಾಯಕರ .15 ಸಾವಿರ ಸಂಭಾವನೆಯನ್ನು .25 ಸಾವಿರಗಳಿಗೆ ಹಾಗೂ ಡಿ ಗ್ರೂಪ್‌ ನೌಕರರ .12 ಸಾವಿರ ಸಂಭಾವನೆಯನ್ನು .22 ಸಾವಿರಗಳಿಗೆ ಹೆಚ್ಚಿಸುವಂತೆ ಬಿಬಿಎಂಪಿ ಆಯುಕ್ತರು ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

6 ಮಾರ್ಷಲ್‌ಗಳಿಗೆ ಕೊರೋನಾ ದೃಢ

ಬೆಂಗಳೂರು: ರಾಜಮಹಲ್‌ ಗುಟ್ಟಹಳ್ಳಿ, ಕಾಡುಗೋಡಿ ಗಂಗೇನಹಳ್ಳಿ, ಕೃಷ್ಣರಾಜೇಂದ್ರ ಮಾರುಕಟ್ಟೆವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆರು ಮಂದಿ ಮಾರ್ಷಲ್‌ಗಳಿಗೆ ಸೋಂಕು ದೃಢಪಟ್ಟದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಇವರ ಸಂಪರ್ಕದಲ್ಲಿದ್ದ ಮಾರ್ಷಲ್‌ಗಳನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿಲಿಂಡರ್‌ನೊಂದಿಗೆ ಆಸ್ಪತ್ರೆಗಳಿಗೆ ಅಲೆದ ರೋಗಿ

ಪೌರಕಾರ್ಮಿಕರಿಗೆ ಸೋಂಕು: ವಸಂತ ನಗರ ವಾರ್ಡ್‌ನ ಕುಮಾರಪಾರ್ಕ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ 9 ಮಂದಿ ಪಾಲಿಕೆಯ ಪೌರಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಹಂತ ಹಂತವಾಗಿ ಎಲ್ಲ ಪೌರಕಾರ್ಮಿಕರನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ.


Spread the love

About Laxminews 24x7

Check Also

ಭವಿಷ್ಯ ಹೇಳುತ್ತಿರುವ ಆರ್. ಅಶೋಕ ಬಳಿ ನಾನು ಕೂಡ ಭವಿಷ್ಯ ಕೇಳಲು ಹೋಗಿ ಬರ್ತೇನೆ: ಡಿ.ಕೆ. ಶಿವಕುಮಾರ್

Spread the loveಬೆಂಗಳೂರು: ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ