Breaking News

ನಡು ರಸ್ತೆಯಲ್ಲಿ ಡೀಸೆಲ್ ಲಾರಿ ಪಲ್ಟಿ : ಬಕೆಟ್, ಪಾತ್ರೆ ಹಿಡಿದು ಮುಗಿಬಿದ್ದ ಜನರು.!

Spread the love

ದಾವಣಗೆರೆ : ಇಂದು ಡೀಸೆಲ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಡೀಸೆಲ್ ತುಂಬಿದ ಲಾರಿ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

ಇನ್ನೂ ಲಾರಿಯಿಂದ ಡೀಸೆಲ್ ಸೋರಿಕೆಯಾಗುತ್ತಲೇ ಮುಗಿಬಿದ್ದ ಜನರು ಪಾತ್ರೆ, ಬಕೆಟ್ ತೆಗೆದುಕೊಂಡು ಬಂದು ಡೀಸೆಲ್ ತುಂಬಿಸಿಕೊಂಡು ಹೋಗಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.


Spread the love

About Laxminews 24x7

Check Also

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ”

Spread the love“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ” ಫೆಬ್ರುವರಿ ಹಾಗೂ ಮಾರ್ಚ ತಿಂಗಳಿನ ಗ್ರಹಣ ಹಿಡಿದಿದ್ದ ಗೃಹಲಕ್ಷ್ಮೀಗೆ ಗ್ರಹಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ