Breaking News

ಗಂಡ ಹೆಂಡತಿ ಸೇರಿ ಅಮಾಯಕ ಯುವತಿಯರ ಹನಿ ಟ್ರ್ಯಾಪ್‌

Spread the love

ಬೆಂಗಳೂರು: ಗಂಡನ ಅಣತಿಯಂತೆ ಫೇಸ್​ಬುಕ್​ನಲ್ಲಿ ಅಮಾಯಕ ಯುವತಿಯರ ಸ್ನೇಹ ಬೆಳೆಸುತ್ತಾಳೆ ಈ ಸುಂದರಿ. ಇದಾದ ಕೆಲವೇ ದಿನದಲ್ಲಿ ಮನೆಯಲ್ಲಿ ಹಬ್ಬ ಇದೆ ಊಟಕ್ಕೆ ಬನ್ನಿ ಎಂದು ನಯವಾಗಿ ಕರೆಯುತ್ತಾಳೆ. ಇವಳ ಆಹ್ವಾನಕ್ಕೆ ಓಗೊಟ್ಟು ಹೋದವರ ಲೈಫು ಬರ್ಬಾದ್‌ ಆಗುತ್ತೆ.

ಚಂದ್ರಾಲೇಔಟ್​ನಲ್ಲಿ ವಾಸವಿರುವ ಖತರ್ನಾಕ್​ ದಂಪತಿ ಹೆಸರು ಕಾವ್ಯ ಮತ್ತು ಕೃಷ್ಣ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಈ ದಂಪತಿ ಮಾಡುವ ಕೆಲಸ ಕೇಳಿದ್ರೆ ಶಾಕ್​ ಆಗ್ತೀರಿ. ಸ್ನೇಹಿತರ ಮನೆಗೆ ಹೋಗುವ ಮುನ್ನ ಒಮ್ಮೆ ಯೋಚಿಸಬೇಕು ಅನ್ನಿಸುವತ್ತೆ. ಕೃಷ್ಣನ ಹೆಂಡತಿ ಕಾವ್ಯ ಫೇಸ್​ಬುಕ್​ ಮೂಲಕ ಸುಂದರ ಯುವತಿಯರನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಪರಿಚಯ ಸ್ನೇಹಕ್ಕೆ ತಿರುಗುತ್ತಿದ್ದಂತೆ ನಮ್ಮ ಮನೆಗೊಮ್ಮೆ ಬನ್ನಿ, ಹಬ್ಬ ಇದೆ ಎಂದು ಕರೆಯುತ್ತಾಳೆ. ಪಾಪ ಇವಳ ಮೋಸದ ಜಾಲ ಅರಿಯದ ಅಮಾಯಕ ಹೆಣ್ಮಕ್ಕಳು ಓಕೆ ಎಂದು ಅವಳ ಮನೆಗೂ ಹೋಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಕೃಷ್ಣ ಮತ್ತು ಕಾವ್ಯ ದಂಪತಿಯ ಅಸಲಿ ಆಟ.ಮನೆಗೆ ಬಂದವರಿಗೆ ಮತ್ತು ಬರುವ ಔಷಧ ಬೆರೆಸಿ ಕುಡಿಯಲು ಜ್ಯೂಸ್​ ಕೊಡ್ತಾಳೆ ಕಾವ್ಯ. ಇದ್ಯಾವುದರ ಪರಿವೇ ಇಲ್ಲದ ಯುವತಿಯರು ಆ ಜ್ಯೂಸ್​ ಕುಡಿದು ತಲೆಸುತ್ತು ಬಂದು ಕೆಳಗೆ ಬೀಳುತ್ತಿದ್ದಂತೆ, ಅವರ ಬಟ್ಟೆ ತೆಗೆದು ಅಶ್ಲೀಲವಾಗಿ ಫೋಟೋಶೂಟ್ ಮಾಡ್ತಾನೆ ಕಾವ್ಯಾಳ ಗಂಡ.

ಈ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?: ಚಂದ್ರಲೇಔಟ್​ನ ಯುವತಿಗೆ ಫೇಸ್​ಬುಕ್​ನಲ್ಲಿ ಕಾವ್ಯಾಳ ಪರಿಚಯವಾಗಿತ್ತು. ಗೆಳತಿ ಕರೆದಳು ಎಂದು ಚಂದ್ರಲೇಔಟ್​ನಲ್ಲಿರುವ ಕಾವ್ಯಾಳ ಮನೆಗೆ ಯುವತಿಯೊಬ್ಬಳು ಕಳೆದ ಜನವರಿಯಲ್ಲಿ ಹೋಗಿದ್ದಳು. ಈ ವೇಳೆ ಕಾವ್ಯಾಳ ಗಂಡ ಕೃಷ್ಣ ಹಾಗೂ ಸಾಗರ್ ಎಂಬ ಯುವಕನೂ ಇದ್ದ. ಕಾವ್ಯಾ ಕೊಟ್ಟ ಜ್ಯೂಸ್​ ಕುಡಿಯುತ್ತಿದ್ದಂತೆ ಯುವತಿ ನಿತ್ರಾಣಗೊಂಡಿದ್ದು, ಆಕೆಗೆ ವಿವಸ್ತ್ರಗೊಳಿಸಿ ಬೆತ್ತಲೆ ಮಾಡಿ ಫೋಟೋಗೆ ಕೃಷ್ಣ ಫೋಸ್​ ಕೊಟ್ಟಿದ್ದಾನೆ. ಇವರಿಬ್ಬರ ಫೋಟೋಗಳನ್ನು ಸಾಗರ್​ ಎಂಬಾತ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾನೆ. ಕೃತ್ಯದ ನಂತರ ಸಂತ್ರಸ್ಥ ಯುವತಿ ಬಳಿಯಿದ್ದ ಚಿನ್ನದ ಉಂಗುರ, ಸರ, ಎಟಿಎಂ ಕಾರ್ಡ್ ಕಸಿದುಕೊಂಡಿದ್ದಾರೆ.

ಎಲ್ಲಿಯಾದರೂ ಬಾಯಿಬಿಟ್ಟರೆ ಜಾಲತಾಣಕ್ಕೆ ಫೋಟೋಗಳನ್ನು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ನಿನ್ನ ಪೋಷಕರಿಗೆ ಕಳಿಸ್ತೀವಿ ಅಂತ ಆರು ತಿಂಗಳಿಂದ 4 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಿದೆ ಹನಿಟ್ರ್ಯಾಪ್​ ಕಪಲ್ಸ್​. ಇಷ್ಟಕ್ಕೆ ಸುಮ್ಮನಾಗ ಹನಿಟ್ರ್ಯಾಪ್​ ಕಪಲ್ಸ್, ಸಂತ್ರಸ್ತ ಯುವತಿಯನ್ನ ಮತ್ತೆ ಬೆಂಬಿಡದೆ ಕಾಡಿದೆ. ಕಳೆದ ತಿಂಗಳು ಸಂತ್ರಸ್ತೆಯ ಹಳೇ ವಿಡಿಯೋ ತೋರಿಸಿ ಕಾವ್ಯಾಳ ಗಂಡ ಕೃಷ್ಣ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಮತ್ತಷ್ಟು ಹಣ ಕೊಡಬೇಕು. ಇಲ್ಲವಾದರೆ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವೆ ಎಂದು ವಾಟ್ಸ್‌ಆಯಪ್​ ಮಾಡಿ ಟಾರ್ಚರ್​ ಕೊಟ್ಟಿದ್ದಾನೆ. ಇವರ ಕಿರುಕುಳ ಸಹಿಸಲಾಗದೆ ಸಂತ್ರಸ್ತೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆ ಮೂಲಕ ಖತರ್ನಾಕ್​ ಕಪಲ್ಸ್​ನ ಹನಿಟ್ರ್ಯಾಪ್​ ದಂಧೆ ಬಯಲಿಗೆ ಬಂದಿದೆ.

 

Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ