Breaking News

ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

Spread the love

ಶಿವಮೊಗ್ಗ: : ಮದುವೆಯಾಗಿ ಕೇವಲ ನಾಲ್ಕು ದಿನಕ್ಕೆ ನವ ವಿವಾಹಿತೆಯೊಬ್ಬಳು ಕರೊನಾಕ್ಕೆ ಬಲಿಯಾಗಿರುವ ಘಟನೆ ಶುಕ್ರವಾರ ಹೊರವಲಯದ ಮಲವಗೊಪ್ಪದಲ್ಲಿ ನಡೆದಿದೆ.

ಹರಿಗೆ ನಿವಾಸಿ ಪೂಜಾ (24) ಮೃತಪಟ್ಟ ನವ ವಿವಾಹಿತೆ. ಹೊರವಲಯದ ನಿದಿಗೆ ಟಿಇಎಸ್ ಕಾಲನಿಯ ಪೂಜಾಳನ್ನು ಹರಿಗೆ ನಿವಾಸಿ ಮಹೇಶ್ ಮದುವೆಯಾಗಿದ್ದ. ನಗರದ ನಿದಿಗೆ ಟಿಇಎಸ್ ಕಾಲನಿಯ ವಧುವಿನ ಮನೆಯಲ್ಲಿಯೇ ಸೋಮವಾರ ಮದುವೆಯಾಗಿತ್ತು. ಆದರೆ ಎರಡೇ ದಿನಗಳಲ್ಲಿ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿತ್ತು.

ಒಂದೆರಡು ದಿನ ಮೆಡಿಕಲ್‌ನಿಂದ ಮಾತ್ರೆಗಳನ್ನು ತಂದು ನುಂಗಿದ್ದರು. ಆದರೂ ಚೇತರಿಕೆ ಕಂಡಿರಲಿಲ್ಲ. ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡ ಬಳಿಕ ಶುಕ್ರವಾರ ಬೆಳಗ್ಗೆ ಮಲವಗೊಪ್ಪದ ಖಾಸಗಿ ಕ್ಲಿನಿಕ್‌ನಲ್ಲಿ ಅವರನ್ನು ದಾಖಲಿಸಲಾಗಿತ್ತು. ಆದರೆ ಡ್ರಿಪ್ ಹಾಕಿದ ಅರ್ಧ ಗಂಟೆಯಲ್ಲೇ ಪೂಜಾ ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ ಕರೊನಾ ಟೆಸ್ಟ್‌ಗೆ ಒಳಪಡಿಸಿದಾಗ ಪೂಜಾಗೆ ಸೋಂಕು ಇರುವುದು ದೃಢಪಟ್ಟಿತ್ತು. ಅದರ ವರದಿ ಕೈಸೇರುವ ಮುನ್ನವೇ ಸೋಂಕು ಬಲಿ ಪಡೆದಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ