Breaking News

ಗೋವಾ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆ ವಿಮಾನ ಹಾರಾಟ ಸ್ಥಗಿತ

Spread the love

ಪಣಜಿ, : ಗೋವಾ ಏರ್‌ಪೋರ್ಟ್‌ನಲ್ಲಿ ರಾತ್ರಿ ವೇಳೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.ಗೋವಾದಲ್ಲಿರುವ ಏಕಮಾತ್ರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಬೊಲಿಮ್‌ನಲ್ಲಿ ಸೆಪ್ಟೆಂಬರ್ ವರೆಗೆ ರಾತ್ರಿ ಹೊತ್ತು ವಿಮಾನ ಸಂಚಾರ ನಿಷೇಧಿಸಲಾಗಿದೆ.

ಟಾಟಾ ಪವರ್ ಎಸ್‌ಡಿ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ, ಸಂಜೆಯ ಸಮಯದಲ್ಲಿ ಕಾಮಗಾರಿಯನ್ನು ನಡೆಸುತ್ತಿದೆ. ರಾತ್ರಿ ಹೊತ್ತು ವಿಮಾನ ಹಾರಾಟ ನಿಷೇಧಿಸುವುದರಿಂದ ನಾಗರಿಕ ವಿಮಾನ ಕಾರ್ಯಾಚರಣೆಗೆ ಅಷ್ಟೊಂದು ತೊಂದರೆಯಾಗುವುದಿಲ್ಲ ಎಂದು ಗೋವಾ ಏರ್‌ಪೋರ್ಟ್ ನಿರ್ದೇಶಕ ಗಗನ್ ಮಲಿಕ್ ಹೇಳಿದ್ದಾರೆ. ನವೀಕರಣ ನಡೆಯುತ್ತಿರುವ ಕಾರಣ ವಾಸ್ಕೋ ಟೌನ್‌ನ ಐಎನ್‌ಎಸ್ ಹನ್ಸಾ ಬೇಸ್‌ನ್ನು ಮುಚ್ಚಲಾಗಿದೆ.ಮೇ 8 ರಿಂದಲೇ ನವೀಕರಣ ಕಾಮಗಾರಿ ಆರಂಭವಾಗಿದೆ, ಸೆಪ್ಟೆಂಬರ್ 2021ರವರೆಗೂ ಕಾಮಗಾರಿ ನಡೆಯಲಿದೆ. ರನ್‌ವೇಯನ್ನು ರಾತ್ರಿ 10ರಿಂದ ಬೆಳಗ್ಗೆ 6.30ರವರೆಗೆ ಬಂದ್ ಮಾಡಲಾಗುತ್ತದೆ.ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧವನ್ನು ಮೇ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಭಾರತದಿಂದ ಹೊರಹೋಗುವ ಇಲ್ಲವೇ ಒಳಬರುವ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ಮೇ 31ರವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಡಿಜಿಸಿಎ ಹೇಳಿದೆ.

ವಂದೇ ಭಾರತ್ ಯೋಜನೆಯಲ್ಲಿ ಸಂಚರಿಸುವ ವಿಮಾನಗಳಿಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಈ ಆದೇಶ ಸರಕು ವಿಮಾನ ಮತ್ತು ವಿಶೇಷ ಅನುಮತಿ ಪಡೆದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಲ್ಲದೆ ಆಯ್ದ ಮಾರ್ಗಗಳಲ್ಲಿ ನಿಯಮಿತವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಸಂಬಂಧಿತ ಆಡಳಿತಗಳು ಅನುಮತಿಸಬಹುದಾಗಿದೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ