Breaking News

ನೀವು ‘ಕೊರೋನಾ ಸೋಂಕಿತ’ರಾಗಿದ್ದೀರಾ.? ಹಾಗಿದ್ದರೇ ಭಯಬೇಡ.! ‘ಆನ್ ಲೈನ್’ನಲ್ಲೇ ‘ತಜ್ಞ ವೈದ್ಯ’ರಿಂದ ಸಲಹೆ ಪಡೆಯಿರಿ.!

Spread the love

ರಾಜ್ಯಾಧ್ಯಂತ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ದಿನವೊಂದಕ್ಕೆ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹೊಸದಾಗಿ ಪರೀಕ್ಷೆಯಿಂದ ದೃಢಪಡುತ್ತಿದೆ. ಈ ಸಮಯದಲ್ಲಿ ಬೇಕಿರೋದು ಸೋಂಕಿತರಾದವರಿಗೆ ಧೈರ್ಯ. ಜೊತೆಗೆ ತಜ್ಞ ವೈದ್ಯರ ಸಲಹೆ. ಹಾಗಿದ್ದರೇ ನೀವು ಕೊರೋನಾ ಸೋಂಕಿತರಾಗಿದ್ದೀರಾ.? ಆಸ್ಪತ್ರೆಗೆ ಅನವಶ್ಯಕ ಭೇಟಿ ಕಡಿಮೆ ಮಾಡಿ, ತಜ್ಞ ವೈದ್ಯರಿಂದ ಆನ್ ಲೈನ್ ನಲ್ಲೇ ಹೇಗೆ ಚಿಕಿತ್ಸೆಯ ಸಲಹೆ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ಓದಿ..

ಕೊರೋನಾ ಸೋಂಕಿನ ವೈರಸ್ ಅಬ್ಬದ ಈ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆಯ ತರಾವರಿ ಸುದ್ದಿಗಳು ಹರಿದಾಡುತ್ತಿವೆ. ಹಾಗ್ ಮಾಡಿ, ಹೀಗ್ ಮಾಡಿ ಕೊರೋನಾದಿಂದ ರಕ್ಷಣೆ ಪಡೆಯಿರಿ. ಈ ಆಹಾರ ಸೇವಿಸಿ, ಆ ಆಹಾರ ಸೇವಿಸಬೇಡಿ ಎಂಬುದಾಗಿಯೂ ದಿನಂಪ್ರತಿ ಸುದ್ದಿಗಳು ಹರಿದಾಡೋದನ್ನು ಓದಿದ್ದೀರಿ.. ಅದೇ ರೀತಿಯಾಗಿ ಕೆಲವರು ಪಾಲನೆ ಮಾಡಿಯೂ ಇದ್ದೀರಿ. ಹೀಗಿದ್ದೂ ಕೊರೋನಾ ಸೋಂಕು ಮಾತ್ರ ಶಾಕ್ ಕೊಡದೇ ಬಿಟ್ಟಿಲ್ಲ.

ಹಾಗಾದ್ರೇ.. ನೀವು ಕೊರೋನಾ ಸೋಂಕಿತರಾದಾಗ ಮೊದಲು ಧೈರ್ಯದಿಂದ ಇರಬೇಕು. ಯಾವುದೇ ಕಾರಣಕ್ಕೂ ಭಯವನ್ನು ಮಾತ್ರ ಬೀಳಬಾರದು. ಮನೆಯಲ್ಲೇ ಹೋಂ ಐಸೋಲೇಷನ್ ಆಗಿ. ಹೀಗೆ ಆದಾಗ ಆಸ್ಪತ್ರೆಗೆ ಅನವಶ್ಯಕವಾಗಿ ಭೇಟಿ ಮಾಡೋದನ್ನು ನಿಲ್ಲಿಸಿ. ಮನೆಯಲ್ಲಿಯೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಸಂಜೀವಿನಿ ಓಪಿಡಿ ಆಪ್ ಮೂಲಕ ತಜ್ಞ ವೈದ್ಯರಿಂದ ಸಲಹೆ ಪಡೆಯಬಹುದು.

ಕೊರೋನಾ ಸೋಂಕಿತರು ತಜ್ಞ ವೈದ್ಯರಿಂದ ಹೇಗೆ ಆನ್ ಲೈನ್ ಮೂಲಕ ಸಲಹೆ ಪಡೆಯಬೇಕು.?

  • ನೀವು ಕೊರೋನಾ ಸೋಂಕಿತರಾಗಿ ಹೋಂ ಐಸೋಲೇಷನ್ ಆದ ನಂತ್ರ, ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯೋದಕ್ಕಾಗಿ ಮನೆಯಿಂದ ಹೊರಗೆ ಬರೋದು ಅವಶ್ಯಕತೆ ಇಲ್ಲ. ಅದರ ಬದಲಾಗಿ Play Store ಮುಖಾಂತರ in ಆಪ್ ಡೌನ್ ಲೋಡ್ ಮಾಡಿರಿ. ಅಥವಾ ವೆಬ್ ಬ್ರೌಸರ್ ಮೂಲಕ https://esanjeevaniopd.in ಮೂಲಕ ಸರ್ಚ್ ಮಾಡಿ, ಡೌನ್ ಲೋಡ್ ಮಾಡಿಕೊಳ್ಳಿ.
  • ಹೀಗೆ ನೀವು ಇ-ಸಂಜೀವಿನಿ ಓಪಿಡಿ ಆಪ್ ಡೌನ್ ಲೋಡ್ ಮಾಡಿಕೊಂಡ ನಂತ್ರ, ಸೋಂಕಿತರಾದಂತ ನೀವು, ನಿಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಿ.
  • ನೀವು ಇ-ಸಂಜೀವಿನಿ ಓಪಿಡಿ ಮೂಲಕ ಹೆಸರು ನೊಂದಣಿ ಮಾಡಿಕೊಂಡ ನಂತ್ರ, ನಿಮಗೆ ಟೋಕನ್ ಸಿಗಲಿದೆ. ಆ ಟೋಕನ್(ಓಟಿಪಿ) ಬರಲಿದೆ.
  • ಈ ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆ ಬಳಸಿ, ನಿಮ್ಮ ಮೊಬೈಲ್ ಗೆ ಬಂದಿರುವಂತ ಓಟಿಪಿ ಬಳಸಿ, ಇ-ಸಜೀವಿನಿ ಆಪ್ ನಲ್ಲಿ ಲಾಗಿನ್ ಆಗಿ.
  • ಇದೆಲ್ಲ ಆದ ನಂತ್ರ, ರೋಗಿಗೆ ಸಂಬಂಧಿಸಿದ ದಾಖಲೆಗಳು, ಪ್ರಯೋಗಾಲಯ ವರದಿಗಳು ಇದ್ದಲ್ಲಿ ಅಪ್ ಲೋಡ್ ಮಾಡಿ.
  • ಹೀಗೆ ಕೊರೋನಾ ಸೋಂಕಿತರಾದಂತ ನೀವು, ಸೂಚನೆ ಪಡೆದ ಕೂಡಲೇ ಬೆಳಿಗ್ಗ 10 ರಿಂದ ಸಂಜೆ 4ರವರೆಗೆ ತಜ್ಞ ವೈದ್ಯರಿಂದ ಸೋಂಕಿನ ಲಕ್ಷಣಗಳ ಅನುಸಾರವಾಗಿ ಔಷಧಿಯ ಸಲಹೆಯನ್ನು ಪಡೆಯಿರಿ.
  • ನೀವು ಕರೆ ಮಾಡಿ ತಜ್ಞ ವೈದ್ಯರಿಂದ ಮನೆಯಲ್ಲಿಯೇ ಕುಳಿತು ಸಲಹೆಯನ್ನು ಪಡೆಯಬಹುದು. ಇಲ್ಲವೇ ವೀಡಿಯೋ ಮುಖಾಂತರ ಸಂವಾದ ನಡೆಸಿ, ಪೇಷೆಂಟ್ ಪ್ರೊಫೈಲ್ ಮುಖಾಂತರ ವೈದ್ಯರ ಸಲಹೆ ಚೀಟಿ ಪಡೆಯಬಹುದಾಗಿದೆ.

Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ