Breaking News

ಕೂಡ್ಲಿಗಿ:ಪಪಂ ಚುನಾವಣೆ ಮತಯಾಚಿಸಿದ,ಶಾಸಕ ಎನ್.ವೈ.ಗೋಪಾಲಕೃಷ್ಣ

Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು,ಪಪಂನ 1ಮತ್ತು 12ನೇ ವಾರ್ಡ್ ಗಳ ಚುನಾವಣಾ ಪ್ರಯುಕ್ತ.ಅಭ್ಯರ್ಥಿಗಳಾದ ಪ್ರಕಾಶ ನಾಯ್ಕ ಹಾಗೂ ಶ್ರೀಮತಿ ಮಲ್ಲಮ್ಮ ಪರ ಮತಯಾಚನೆ ಮಾಡಿ ಮಾತನಾಡಿದರು,12ನೇವಾರ್ಡ್ ನಲ್ಲಿ ಶ್ರೀಸೊಲ್ಲಮ್ಮ ದೇವಿ ದೇವಸ್ಥಾನದ ಆವರಣದಲ್ಲಿ,ಮತದಾರರನ್ನು ಉದ್ದೇಶಿಸಿ ಮಾತನಾಡಿ ಮತಯಾಚನೆ ಮಾಡಿದರು.

ಪಟ್ಟಣದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ.ಪಟ್ಟಣದ ಹಿತಕ್ಕಾಗಿ ಹಾಗೂ ನಾಗರೀಕರ ಸಮಸ್ಥ ಶ್ರೇಯೋಭಿವೃದ್ಧಿಗಾಗಿ, ಬಿ.ಜೆ.ಪಿ ಶ್ರಮಿಸುತ್ತಿದೆ ಕಾರಣ ಬಿಜೆಪಿ ಅಭ್ಯರ್ಥಿಗಳನ್ನ ಆರಿಸಿ ಎಂದರು.ಬಿಜೆಪಿ ಜಿಲ್ಲಾ ಮುಖಂಡರಾದ ಚನ್ನಬಸವನಗೌಡ,ಅನಿಲ್ ಕುಮಾರ,ಬಂಗಾರು ಹನುಮಂತು, ಹೆಚ್.ವೀರನಗೌಡ್ರು,ತರಕಾರಿ ರೇವಣ್ಣ,ಮೊರಬ ಶಿವಣ್ಣ,ಎಸ್ಪಿ ಪ್ರಕಾಶ,ಬಿ.ಭೀಮೇಶ,ಚನ್ನಬಸಪ್ಪ, ನಾರಾಯಣಪ್ಪ,ಅಭ್ಯರ್ಥಿ ಮಲ್ಲಮ್ಮ ವೇದಿಕೆಯಲ್ಲಿದ್ದರು.ಅಭ್ಯರ್ಥಿ ಮಲ್ಲಮ್ಮ ಮತದಾರರಲ್ಲಿ ಮತಯಾಚನೆ ಮಾಡಿ ಮಾತನಾಡಿದರು,ಜಿಲ್ಲಾ ಮಟ್ಟದ ತಾಲೂಕು ಮಟ್ಟದ , ಪಟ್ಟಣದ ಬಿ.ಜೆ.ಪಿ ಮುಖಂಡರು ಹಾಗೂ ಕಾರ್ಯಕರ್ತರು,ಜನಪ್ರತಿನಿಧಿಗಳು ಇದ್ದರು.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ