Breaking News

ಎರಡನೇ ದಿನವೂ ಮುಂದುವರೆದ ಬ್ಯಾಂಕ್ ನೌಕರರ ಮುಷ್ಕರ

Spread the love

ನವದೆಹಲಿ, ಮಾ.16-ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಸಿ ಬ್ಯಾಂಕ್ ನೌಕರರು ನಡೆಸುತ್ತಿರುವ ರಾಷ್ಟ್ರ ವ್ಯಾಪಿ ಬ್ಯಾಂಕ್ ಮುಷ್ಕರ ಎರಡನೆ ದಿನಕ್ಕೆ ಕಾಲಿಟ್ಟಿದೆ. ಬ್ಯಾಂಕ್‍ಗಳ ಮುಷ್ಕರದಿಂದ ದೇಶಾದ್ಯಂತ ಗ್ರಾಹಕರು ಹಣ ಡ್ರಾ, ಠೇವಣಿ, ಚೆಕ್ ಕ್ಲಿಯರೆನ್ಸ್ ಮತ್ತಿತರ ಸೇವೆಗಳಿಂದ ವಂಚಿತರಾಗಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿರುವ ಖಾಸಗೀಕರಣ ನೀತಿ ವಿರೋಸಿ ಒಂಬತ್ತು ಬ್ಯಾಂಕ್ ನೌಕರರ ಸಂಘಟನೆ ನಿನ್ನೆಯಿಂದ ಹಮ್ಮಿಕೊಂಡಿರುವ ಮುಷ್ಕರದಲ್ಲಿ 10 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದು ನಮ್ಮ ಹೋರಾಟ ಯಶಸ್ವಿಯಾಗಿದೆ ಎಂದು ಬ್ಯಾಂಕ್ ಸಂಘಟನೆಗಳ ಸಂಯುಕ್ತ ರಂಗ ಹೇಳಿಕೊಂಡಿದೆ.ನಮ್ಮ ಪ್ರತಿಭಟನೆಯಲ್ಲಿ ಸಾವಿರಾರು ತರುಣ ಉದ್ಯೋಗಿಗಳೆ ಮುಂಚೂಣಿಯಲ್ಲಿದ್ದರು. ಇದನ್ನು ಗಮನಿಸಿದರೆ ಯುವ ಸಮುದಾಯಕ್ಕೆ ಖಾಸಗೀಕರಣ ನೀತಿಯಿಂದಾಗುವ ಪರಿಣಾಮದ ಅರಿವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಸಂಘಟನೆ ಮುಖಂಡ ಸಿ.ಎಚ್.ವೆಂಕಟಚಲಮ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಗೆ ಆಗಮಿಸಲಿದ್ದಾರೆ ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ

Spread the loveಬೆಳಗಾವಿ: ಶಿರಸಿ ವೇದ ವೆಲ್‌ನೆಸ್ ಸೆಂಟರ್ ಹಾಗೂ ನಿಸರ್ಗಮನೆ ಖ್ಯಾತ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ