ತಿರುಪತಿ : ತಿರುಪತಿ ವಿಮಾನ ನಿಲ್ದಾಣದಲ್ಲಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಂದ್ರಬಾಬು ನಾಯ್ಡು ಚಿತ್ತೂರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಹಾಜರಾಗಲು ತೆರಳುತ್ತಿದ್ದ ವೇಳೆ, ಅವರನ್ನು ಏರ್ಪೋರ್ಟ್ನಲ್ಲೇ ರೇನಿಗುಂಟಾ ಪೊಲೀಸರು ತಡೆದಿದ್ದಾರೆ. ಇದನ್ನು ಅಲ್ಲಿಯೇ ಖಂಡಿಸಿದ ಅವರು ಬೇಕಾದರೆ ನನ್ನನ್ನು ಬಂಧಿಸಿ.ಆದರೆ ನಿರ್ಭಂಧಿಸಬೇಡಿ. ಇಲ್ಲಿ ಏನು ನಡೆಯುತ್ತಿದೆ? ನಾನು ಯಾರನ್ನಾದರೂ ಕೊಲ್ಲಲು ಹೋಗುತ್ತಿದ್ದೇನಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಲು ಕುಳಿತಿದ್ದಾರೆ. ಈ ವೇಳೆ ರೇನಿಗುಂಟಾ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
Laxmi News 24×7