ಬೆಳಗಾವಿ : ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದಾಳಿ ವೇಳೆ ಗಾಂಜಾ ಮಾರಾಟ ಮಾಡುತಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಡಿಸಿಪಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ಯಡಿಯೂರಪ್ಪ ಮಾರ್ಗದಲ್ಲಿ ನಡೆದ ದಾಳಿಯಲ್ಲಿ ಗಾಂಜಾ ಮಾರುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದು, ಸುಮಾರು ಒಂದುವರೆ ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಜ್ಞಾನೇಶ್ವರ ಪಾಟೀಲ ಬಂಧಿತ ಆರೋಪಿ. ಬೆಳಗಾವಿಯ ಪೊಲೀಸರು ಮಟಕಾ ಜೂಜಾಟ,ಗಾಂಜಾ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದು,ಡಿಸಿಪಿ ವಿಕ್ರಂ ಅಮಟೆ ಅವರು ನಿರಂತರವಾಗಿ ದಾಳಿಗಳನ್ನ ಮಾಡುತ್ತಿದ್ದಾರೆ.
Laxmi News 24×7