ವಿಜಯಪುರ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರ ಮೇಲೆ ಕಾಮುಕ ಕಣ್ಣು ಹಾಕಿದ್ದಕ್ಕೆ ಹಿಗ್ಗಾಮುಗ್ಗಾ ಧರ್ಮದೇಟು ತಿಂದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಶಿನಾಥ ಧರ್ಮದೇಟು ತಿಂದ ಕಾಮುಕ. ಈತ ಗಿಡದ ಮೇಲೆ ಕುಳಿತು ಕದ್ದು ಕದ್ದು ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ನೋಡುತ್ತಿದ್ದನುಎಂದಿನಿಂತೆ ಭಾನುವಾರ ಕೂಡ ಕಾಮುಕ ಕಾಶಿನಾಥ ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ನೋಡುತ್ತಿದ್ದನು. ಆದರೆ ಈ ವೇಳೆ ಸಾರ್ವಜನಿಕರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾನೆ. ಆಗ ಕಾಶಿನಾಥನನ್ನು ರಸ್ತೆಯಲ್ಲಿ ಎಳೆದಾಡಿ, ಬಟ್ಟೆ ಬಿಚ್ಚಿ ಚಪ್ಪಲಿ ಸೇವೆ ಮಾಡಿದ್ದಾರೆ. ಜೊತೆಗೆ ಜನರು ಬಡಿಗೆಯಿಂದ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ನಂತರ ತಾಳಿಕೊಟಿ ಪೊಲೀಸರಿಗೆ ಕಾಶಿನಾಥನನ್ನ ಸಾರ್ವಜನಿಕರು ಒಪ್ಪಿಸಿದ್ದಾರೆ.
ಇದಕ್ಕೂ ಮುಂಚೆ ಕೂಡ ಕಾಶಿನಾಥ ಅನೇಕ ಕಾಮಚೇಷ್ಟೆ ಮಾಡಿ ಗ್ರಾಮದಲ್ಲಿ ಧರ್ಮದೇಟು ತಿಂದಿದ್ದಾನೆ. ಆದರೆ ಥಳಿಸಿದ ಸಾರ್ವಜನಿಕರ ಮೇಲೆ ಕಾಶಿನಾಥ ದೂರು ದಾಖಲಿಸಿದ್ದನಂತೆ. ಹೀಗಾಗಿ ಗ್ರಾಮಕ್ಕೆ ಎಸ್‍ಪಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಎಸ್‍ಪಿ ಮುಂದೆ ಕಾಶಿನಾಥ ತಪ್ಪೊಪ್ಪಿಕೊಂಡು ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾನೆಂಬ ಮಾಹಿತಿ ದೊರೆತಿದೆ.
Laxmi News 24×7