ತಮಿಳುನಾಡು: ಮಕ್ಕಳ ನಿಷ್ಕಲ್ಮಶ ಮನಸ್ಸಿಗೆ ಕನ್ನಡಿ ಹಿಡಿದಿರುವಂಥ ಪ್ರಸಂಗವೊಂದು ತಮಿಳುನಾಡಿನಲ್ಲಿ ಸಂಕ್ರಾಂತಿಯ ದಿನದಂದೇ ನಡೆದಿದೆ.
ಪೊಂಗಲ್ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳ ಮೂಲಕ 2,500 ರೂ. ನಗದು, ಕಬ್ಬು ಮತ್ತು ಬಟ್ಟೆಬರೆಗಳನ್ನು ನೀಡುವುದಾಗಿ ಘೋಷಿಸಿತ್ತು.
ಮಾನಸಿಕ ಅಸ್ವಸ್ಥೆ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊತ್ತಿರುವ ವಿಧವೆ, 70 ವರ್ಷದ ವೃದ್ಧೆ ಸುಬ್ಬುಲಕ್ಷ್ಮಿ ಹೇಗಾದರೂ ಮಾಡಿ, ಆ ಉಡುಗೊರೆ ಸ್ವೀಕರಿಸಿಕೊಂಡು ಬರೋಣ ಎಂದು ತೀರಾ ಅನಾರೋಗ್ಯದ ನಡುವೆಯೂ ನಡಿಗೆ ಆರಂಭಿಸಿದರು. ಸ್ವಲ್ಪ ದೂರ ಹೋಗುವಷ್ಟರಲ್ಲಿ ಕೈಲಾಗದೇ ಕುಸಿದುಬಿದ್ದರು.ಅಲ್ಲೇ ಆಟವಾಡುತ್ತಿದ್ದ ಅವಳಿ ಸಹೋದರರಾದ 9 ವರ್ಷದ ನಿತಿನ್ ಮತ್ತು ನಿತೀಶ್, ಅಜ್ಜಿಯನ್ನು ನೋಡಿ ಮರುಗಿದರು. ಜೊತೆಗೆ ಅಜ್ಜಿಯನ್ನು ಸಂತೈಸಿ ವಿಚಾರವನ್ನು ತಿಳಿದ ಸಹೋದದರು ಅಜ್ಜಿಗೆ ಪೊಂಗಲ್ ಗಿಫ್ಟ್ ಕೊಡಿಸಲೇಬೇಕೆಂದು ಪಣತೊಟ್ಟು, ಕೂಡಲೇ ತಳ್ಳುಗಾಡಿಯೊಂದನ್ನು ತಂದು, ಅದರಲ್ಲಿ ಅಜ್ಜಿಯನ್ನು ಮಲಗಿಸಿ ಗಾಡಿಯನ್ನು ತಳ್ಳುತ್ತಾ ಪಡಿತರ ಅಂಗಡಿ ತಲುಪಿಸಿದರು. ಈ ಬಾಲಕರ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.