Breaking News

ಉದ್ಘಾಟನೆ ಭಾಗ್ಯ ಕಾಣದ ಬಸ್‌ ನಿಲ್ದಾಣ: ಸ್ಥಳಾವಕಾಶ ಇಲ್ಲದೇ ಎಲ್ಲೆಂದರಲ್ಲಿ ನಿಲ್ಲುವ ವಾಹನಗಳು

Spread the love

ನವಲಗುಂದ: ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಹೈಟೆಕ್‌ ಬಸ್‌ ನಿಲ್ದಾಣ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳು ಆರಂಭಗೊಂಡು ಸಂಸ್ಥೆಗೆ ಲಾಭವನ್ನೂ ನೀಡುತ್ತಿವೆ ಆದರೆ ಬಸ್‌ ನಿಲ್ದಾಣ ಲೋಕಾರ್ಪಣೆಗೆ ಮುಹೂರ್ತ ನಿಗದಿ ಮಾಡದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಈ ಬಸ್‌ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಗಿ ಇದೆ ಆದರೆ ನೀರೇ ಇರಲ್ಲ. ಸ್ಥಳಾವಕಾಶ ಇಲ್ಲದ್ದರಿಂದ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ, ಖಾಸಗಿ ವಾಹನ, ಅಟೋಗಳನ್ನು ನಿಲ್ಲಿಸಲಾಗುತ್ತಿದೆ. ಸ್ವತ್ಛತೆಯಂತೂ ಮಾಯವಾಗಿದೆ. ಚರಂಡಿಗಳ ಚಿಕ್ಕದಾಗಿದ್ದರಿಂದ ದುರ್ವಾಸನೆ ಬೀರುತ್ತಿವೆ.

 

ಕೆಲ ಗ್ರಾಮಗಳಿಗೆ ಬಸ್ಸೇ ಇಲ್ಲ: ನೆರೆ ಹಾವಳಿಯಿಂದ ತತ್ತರಿಸಿರುವ ಕೆಲ ಗ್ರಾಮಗಳಿಗೆ ಬಸ್‌ ಇಲ್ಲದೇ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸದ್ಯ ಶಾಲೆ- ಕಾಲೇಜುಗಳು ಆರಂಭವಾಗಿವೆಯಾದರೂ ಗ್ರಾಮೀಣ ಹಾಗೂ ತಾಲೂಕು ಮಟ್ಟದಿಂದ ಸಮಯಕ್ಕೆ ಸರಿಯಾಗಿ ಬಸ್‌ ಸಂಚಾರ ಇಲ್ಲದೇ ವಿದ್ಯಾರ್ಥಿಗಳು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಬಸ್‌ಗಳಿಗಾಗಿ ತಾಸುಗಟ್ಟಲೇ ಕಾಯುತ್ತ ಕುಳಿತುಕೊಳ್ಳುವಂತಾಗಿದೆ.

ಬಸ್‌ಗಳು ಬರದೇ ಇರುವುದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು ನಿಂತುಕೊಂಡೇ ಹೋಗುವಂತಹ ಸ್ಥಿತಿ ಇದೆ. ಆಯಾ
ಪಟ್ಟಣಗಳಿಗೆ ಬಸಗಳನ್ನು ಬಿಡದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಡಿಪೋ ಇದ್ದರೂ ಇಲ್ಲದಂತಾಗಿದೆ.
– ಶ್ರೀಶೈಲ ಮೂಲಿಮನಿ, ಎಪಿಎಂಸಿ ಸದಸ್ಯರು.


Spread the love

About Laxminews 24x7

Check Also

ಹಾವೇರಿ ಹುಕ್ಕೇರಿಮಠದ ಜಾತ್ರೆಗೆ ದಿನಗಣನೆ

Spread the loveಹಾವೇರಿ : ಜಿಲ್ಲೆಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ 25 ರಿಂದ ಜನವರಿ ಎರಡರವರೆಗೆ ಹಾವೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ