Breaking News

Big breaking: ಭೂಗತ ಪಾತಕಿ ಛೋಟಾ ರಾಜನ್ ಸೇರಿ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ

Spread the love

ಮುಂಬೈ: ಭೂಗತ ಪಾತಕಿ ಛೋಟಾ ರಾಜನ್ ಮತ್ತು ಇತರ ಮೂವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಸೋಮವಾರ ಶಿಕ್ಷೆ ವಿಧಿಸಿದೆ. ನಾಲ್ವರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.ನಂದು ವಾಜೇಕರ್ ಎಂಬ ಪನ್ವೇಲ್ ಬಿಲ್ಡರ್ ಗೆ ರಾಜನ್ ಬೆದರಿಕೆ ಒಡ್ಡಿದ್ದ ಪಕರಣ ಹಾಗೂ ರಾಜನ್ ವಾಜೇಕರ್ ನಿಂದ 26 ಕೋಟಿ ರೂಪಾಯಿ ಗಳನ್ನು ಸುಲಿಗೆ ಮಾಡಲು ಯತ್ನಿಸಿದ್ದಎಂದು ಆರೋಪಿಸಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲು ಶಿಕ್ಷೆ ವಿಧಿಸಿದೆ.

ಪ್ರಕರಣದ ಹಿನ್ನಲೆ: ಬಿಲ್ಡರ್ ನನಂದು ವಾಜೇಕರ್ ಗೆ ಬೆದರಿಕೆ ಹಾಕಿದ ಆರೋಪ ಛೋಟಾ ರಾಜನ್ ಮೇಲೆ ಇದ್ದು, ಅವರಿಂದ 26 ಕೋಟಿ ರೂಪಾಯಿ ಗಳನ್ನು ದೋಚಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ವಿವರಗಳ ಪ್ರಕಾರ, ನಂದು ವಾಜೇಕರ್ ಎಂಬ ಬಿಲ್ಡರ್ 2015ರಲ್ಲಿ ಪುಣೆಯಲ್ಲಿ ಜಮೀನು ಖರೀದಿಸಿದ್ದು, 2 ಕೋಟಿ ರೂ ಕಮಿಷನ್ ಅನ್ನು ಪರಮಾನಂದ್ ಠಕ್ಕರ್ ಎಂಬ ಏಜೆಂಟ್ ಗೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ಥಾಕರ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟರು, ವಾಜೇಕರ್ ಅದನ್ನು ಒಪ್ಪಲಿಲ್ಲ. ನಂತರ ಥಾಕರ್ ಛೋಟಾ ರಾಜನ್ ನನ್ನು ಸಂಪರ್ಕಿಸಿ, ತನ್ನ ಕೆಲವರನ್ನು ವಾಜೇಕರ್ ಕಚೇರಿಗೆ ಕಳುಹಿಸಿ 26 ಕೋಟಿ ರೂಪಾಯಿಗಳಿಗೆ ಬೇಡಿಕೆ ಯಿಟ್ಟಿದ್ದಮತ್ತು ವಜೇಕರ್ ನನ್ನು ಕೊಲ್ಲುವುದಾಗಿ ಬೆದರಿಕೆ ಯನ್ನೂ ಒಡ್ಡಿದ್ದಎನ್ನಲಾಗಿದೆ. ಈ ಪ್ರಕರಣದ ನಾಲ್ವರು ಆರೋಪಿಗಳಾದ ಸುರೇಶ್ ಶಿಂಧೆ, ಲಕ್ಷ್ಮಣ ನಿಕಮ್ ಅಲಿಯಾಸ್ ದಡಾಯ, ಸುಮಿತ್ ವಿಜಯ್ ಮಾತ್ರೆ ಮತ್ತು ಛೋಟಾ ರಾಜನ್ ಆರೋಪಿಗಳಾಗಿದ್ದರು.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ