ಕೋಕಾ-ಕೋಲಾ ಸಂಸ್ಥೆಯೊಂದಿಗೆ ವಿಜಯಪುರವನ್ನು ಕೈಗಾರಿಕಾ ಕೇಂದ್ರವಾಗಿ ಪರಿಗಣಿಸಲು ಸಚಿವ ಎಂ.ಬಿ.ಪಾಟೀಲ ಚರ್ಚೆ
ಭಾರತದ ಆಹಾರ ಸಂಸ್ಕರಣಾ ವಲಯಕ್ಕೆ ಕೋಕಾ-ಕೋಲಾ ಸಂಸ್ಥೆ ₹25,760 ಕೋಟಿ ಹೂಡಿಕೆ ಯೋಜನೆಯನ್ನು ಪ್ರಕಟಿಸಿದ್ದು,
ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಅವರ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕುರಿತು ಕಂಪೆನಿಯ ಹಿರಿಯ ಉಪಾಧ್ಯಕ್ಷರೊಂದಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಚರ್ಚೆ ನಡೆಸಲಾಯಿತು. ಪಾನೀಯ ಉತ್ಪಾದನೆಗೆ ಅತ್ಯವಶ್ಯಕವಾದ ಸಮೃದ್ಧ ಹಾಗೂ ಸ್ಥಿರ ಜಲ ಲಭ್ಯತೆಯನ್ನು ಉಲ್ಲೇಖಿಸಿ, ವಿಜಯಪುರವನ್ನು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಪರಿಗಣಿಸುವಂತೆ ಪ್ರಸ್ತಾಪಿಸಿದರು.
ರಾಜ್ಯಕ್ಕೆ ದೊಡ್ಡ ಉದ್ದಿಮೆಗಳನ್ನು ತಂದು, ದೇಶೀಯ ಕೈಗಾರಿಕೆಯನ್ನು ಬಲಗೊಳಿಸಿ, ಪ್ರತಿ ಜಿಲ್ಲೆಗೆ ಉತ್ತಮ ಉದ್ಯೋಗಗಳನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.
Laxmi News 24×7