ಹಾವೇರಿ : ಜಿಲ್ಲೆಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ 25 ರಿಂದ ಜನವರಿ ಎರಡರವರೆಗೆ ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಹುಕ್ಕೇರಿಮಠ ತನ್ನ ವಿಶಿಷ್ಠತೆಯಿಂದಲೇ ಜನಜನಿತವಾಗಿದೆ. ಈ ಹಿಂದೆ ಮಠದ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಶಿವಬಸವ ಮತ್ತು ಲಿಂಗೈಕ್ಯ ಶಿವಲಿಂಗಸ್ವಾಮಿಗಳ ಪುಣ್ಯಸ್ಮರಣೆಯನ್ನ ಪ್ರತಿವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಲಿಂಗೈಕ್ಯ ಶ್ರೀಗಳ ಭಾವಚಿತ್ರಗಳ ಮೆರವಣಿಗೆಯನ್ನ ವಿದ್ಯುತ್ ದೀಪ ಅಲಂಕೃತಿ ಕಟ್ಟಿಗೆ ಮಂಟಪದಲ್ಲಿ ಮಾಡಲಾಗುತ್ತದೆ. ಈ ಆಚರಣೆಗೆ ಹುಕ್ಕೇರಿಮಠ ಜಾತ್ರೆ ಎಂದು ಕರೆಯಲಾಗುತ್ತದೆ.ಹುಕ್ಕೇರಿಮಠದ ಜಾತ್ರೆ ಕರ್ನಾಟಕದ ಆರಂಭಿಕ ಜಾತ್ರೆಗಳಲ್ಲಿ ಒಂದು. ಈ ಜಾತ್ರೆ ಆರಂಭವಾದ ನಂತರವೇ ಕರ್ನಾಟಕದ ವಿವಿಧ ಜಾತ್ರೆಗಳು ಆರಂಭವಾಗುತ್ತವೆ. ಅಲ್ಲದೇ, ಉತ್ತರ ಕರ್ನಾಟಕದಲ್ಲಿ ಅತಿದೊಡ್ಡ ಜಾತ್ರೆಗಳಲ್ಲಿ ಹುಕ್ಕೇರಿಮಠ ಜಾತ್ರೆ ಸಹ ಒಂದು. ಈ ಜಾತ್ರೆಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳಲ್ಲದೆ, ರೈತರ, ಜನಸಾಮಾನ್ಯರ ಜಾತ್ರೆಗಳನ್ನ ಆಚರಿಸಲಾಗುತ್ತದೆ. ರೈತರಿಗಾಗಿ ಜಾನುವಾರುಗಳ ಜಾತ್ರೆ ಆಯೋಜಿಸುವುದು ಈ ಜಾತ್ರೆಯ ವಿಶೇಷ.
Laxmi News 24×7