Breaking News

ಗೋಕಾಕ ನಗರದಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿ

Spread the love

ಕುಖ್ಯಾತ ಮನೆಗಳ್ಳರ ಬಂಧನ: ₹33 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ಜಪ್ತಿ
ಗೋಕಾಕ ನಗರದಲ್ಲಿ ನಡೆದಿದ್ದ ಬೃಹತ್ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ, ಭಾರೀ ಪ್ರಮಾಣದ ಚಿನ್ನಾಭರಣ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋಕಾಕ ಶಹರದ ಲಕ್ಷ್ಮೀ ಬಡಾವಣೆಯ ಸಚೀನ ಆಶೋಕ ಗೊಂದಳಿ ಎಂಬುವರ ಮನೆಯ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಟೇಜರಿ ಬಾಗಿಲು ಒಡೆದು ಸುಮಾರು 330 ಗ್ರಾಂ ತೂಕದ ಚಿನ್ನಾಭರಣಗಳು (ಅಂದಾಜು ಮೌಲ್ಯ ₹19,80,000/-), ಸುಮಾರು 900 ಗ್ರಾಂ ತೂಕದ ಬೆಳ್ಳಿಯ ಆಭರಣಗಳು (ಅಂದಾಜು ಮೌಲ್ಯ ₹80,000/-) ಮತ್ತು ₹1,50,000/- ನಗದು ಹಣ ಸೇರಿ ಒಟ್ಟು ₹22,10,000/- ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಮನಗಂಡ ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ|| ಭೀಮಾಶಂಕರ ಎಸ್ ಗುಳೇದ ಅವರ ಸೂಚನೆಯ ಮೇರೆಗೆ, ಪ್ರಕರಣದ ಪತ್ತೆಗಾಗಿ ಸಿಪಿಐ ಸುರೇಶ ಬಾಬು ಆರ್.ಬಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಹೆಚ್ಚುವರಿ ಎಸ್.ಪಿ ರಾಮಗೊಂಡು ಬಸರಗಿ ಮತ್ತು ಡಿ.ಎಸ್.ಪಿ ಶ್ರೀ ರವಿ ಡಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ತನಿಖಾ ತಂಡವು,ನಂದೀಶ ಹನಮಂತಪ್ಪ ಸಕ್ತಪ್ಪನವರ, ನವೀನ ಆಶೋಕ ಮುಂಡರಗಿ ಮತ್ತು ರಮೇಶ ಶಂಕರಪ್ಪ ಆಗಡಿ (ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆರೋಪಿತರು ಕಳ್ಳತನದ ಕೃತ್ಯವನ್ನು
ಒಪ್ಪಿಕೊಂಡಿದ್ದಾರೆ.ಬಂಧಿತರಿಂದ ಒಟ್ಟು 64 ಗ್ರಾಂ ಚಿನ್ನ (ಅಂದಾಜು ಮೌಲ್ಯ ₹7,68,000/-).ಬೆಳ್ಳಿಯ ಆಭರಣಗಳು: ಒಟ್ಟು 590 ಗ್ರಾಂ ಬೆಳ್ಳಿ (ಅಂದಾಜು ಮೌಲ್ಯ ₹92,000/-). ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಿ ಬಂದ ₹5,600/- ನಗದು ಹಣ.ಆಟ್ಟಿಕಾ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದ 39 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ₹4,68,000/-) ವಶಪಡಿಸಿಕೊಳ್ಳುವುದು ಬಾಕಿ ಇದೆ. ಕಳ್ಳರನ್ನು ಬಂಧಿಸಿ, ಅಪಾರ ಪ್ರಮಾಣದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಸಿಪಿಐ ಸುರೇಶ ಬಾಬು ಆರ್.ಬಿ, ಪಿ.ಎಸ್.ಐ ಕಿರಣ ಎಸ್ ಮೋಹಿತೆ, ಹೆಚ್ಚುವರಿ ಪಿ.ಎಸ್.ಐ ನಿಖಿಲ ಕಾಂಬಳೆ, ಮತ್ತು ಸಿಬ್ಬಂದಿ ವರ್ಗದವರಾದ
ಕೆ.ಎನ್.ಈಳಿಗೇರ, ಜೆ.ಎಚ್‌.ಗುಡ್ಡಿ, ಎ.ಸಿ ಕಾಪತಿ, ಎಮ್.ಎಲ್ ಹುಚ್ಚಗೌಡರ, ಎಸ್ ಎಸ್ ಕುರಬೇಟ ಹಾಗೂ ಟೆಕ್ನಿಕಲ್ ಸೆಲ್‌ನ ಶ್ರೀ ಸಚೀನ ಪಾಟೀಲ ಮತ್ತು ವಿನೋದ ಠಕ್ಕನ್ನವರ ಅವರ ಕಾರ್ಯವನ್ನು ಬೆಳಗಾವಿ ಎಸ್.ಪಿ ಅವರು ಶ್ಲಾಘಿಸಿದ್ದಾರೆ.

Spread the love

About Laxminews 24x7

Check Also

ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ

Spread the love ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ