ಚಾಮರಾಜನಗರ: ಇದೇ ರೀತಿ ಆಂತರಿಕ ಕಲಹ ಮುಂದುವರೆದ್ರೆ ಈ ಸರ್ಕಾರ ಇರುವುದಿಲ್ಲ, 5 ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಕೂಡ ಇರಲ್ಲಾ, ಸರ್ಕಾರನೂ ಇರಲ್ಲಾ ಎಂದು ಮಾಜಿ ಸಿಎಂ, ಬೆಳಗಾವಿ ಹಾಲಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಆಂತರಿಕ ಫೈಟ್ ಜೋರಿದೆ, ಎರಡೂವರೆ ವರ್ಷ ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟೇ ಬಂದಿದ್ದಾರೆ. ಆದ್ರೀಗ ತಾನು 5 ವರ್ಷ ಸಿಎಂ ಆಗ್ತಿನಿ, ಬದಲಾವಣೆ ಆದ್ರೆ ತಾನು ಹೇಳಿದವರು ಆಗಬೇಕು, ಡಿಕೆಶಿ ಸಿಎಂ ಆಗಬಾರದೆಂದು ಇದೆಲ್ಲಾ ತಂತ್ರ ಮಾಡ್ತಿದಾರೆ. ಸಿದ್ದರಾಮಯ್ಯ ತಂತ್ರ- ಪ್ರತಿತಂತ್ರದ ನಡುವೆ ಆಡಳಿತ ಹಾಳಾಗಿದೆ, ಇವರ ಹೈಡ್ರಾಮಾಕ್ಕೆ ಆಡಳಿತ ಕುಸಿಯುತ್ತಿದೆ. ಇದೇ ರೀತಿ ಮುಂದುವರೆದ್ರೆ ಸರ್ಕಾರ ಬೀಳುತ್ತೆ ಎಂದು ಹೇಳಿದರು.
Laxmi News 24×7