Breaking News

ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಸುರೇಶ್‍ಕುಮಾರ್

Spread the love

ಬೆಂಗಳೂರು,ಡಿ.28 – ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದರಿಂದ ಏನು ಸಾಧಿಸುತ್ತಾರೆ, ನೆಲಕ್ಕೆ ಅವಮಾನ ಮಾಡುವುದನ್ನೇ ಕೆಲವರು ಜಾತ್ಯಾತೀತತೆ ಎಂದು ನಂಬಿದ್ದಾರೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ನಿನ್ನೆ ಗ್ರಾಮಪಂಚಾಯತ್ ಮತದಾನ ಮಾಡಿದ ಬಳಿಕ ಮೈಸೂರಿನ ಆಪ್ತರ ಮನೆಯಲ್ಲಿ ಬಾಡೂಟ ಸವಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಬೆಂಬಲಿಗನೊಬ್ಬ ಇಂದು ಹನುಮ ಜಯಂತಿ ಎಂದು ನೆನಪಿಸಿದ್ದ.

ಇದಕ್ಕೆ ಎಂದಿನಂತೆ ತಮ್ಮ ಶೈಲಿಯಲ್ಲಿ ಸಹಜವಾಗಿ ಉತ್ತರಿಸಿದ್ದ ಸಿದ್ದರಾಮಯ್ಯ, ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಏನಾಗಲ್ಲ ಚಿಕನ್ ತಿನ್ನು ಎಂದು ಉತ್ತರಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸಚಿವ ಸುರೇಶ್‍ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ದು ಅಗತ್ಯವಿತ್ತೇ? ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ ರಾಮನ ಹುಟ್ಟಿದ ಪ್ರಮಾಣ ಪತ್ರ ಕೇಳಿದ್ದು ನೆನಪಿಗೆ ಬರುತ್ತಿದೆ. ಅದಕ್ಕಾಗಿಯೇ ಈ ನೆಲದ ನಂಬಿಕೆಗಳ ಬಗ್ಗೆ ಗೌರವ ಇರುವ ಅಸಂಖ್ಯಾತ್ಟ್ಠ ಜನತೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳಿಗೂ ಅಷ್ಟಕ್ಕೆ ಅಷ್ಟೇ ಎಂಬುದು ತಿಳಿದಿರುವಂಥಹದ್ದೇ… ಈ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ಮೀನು ತಿಂದಿದ್ದು ವಿವಾದವಾಗಿತ್ತು.
ಈಗ ಮೈಸೂರಿನ ಸಿದ್ದರಾಮನ ಹುಂಡಿಗೆ ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆ ಭೇಟಿ ನೀಡಿದ ವೇಳೆ ಸಿದ್ದರಾಮಯ್ಯ ಹನುಮ ಜಯಂತಿಯ ಬಗ್ಗೆ ಮಾತನಾಡಿದ್ದರು.


Spread the love

About Laxminews 24x7

Check Also

ದ್ವೇಷ ಭಾಷಣ, ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ ಸೇರಿ 8 ವಿಧೇಯಕಗಳಿಗೆ ಸಂಪುಟ ಅಸ್ತು

Spread the loveಬೆಂಗಳೂರು: ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಭಾಷಣ ತಡೆ, ಸಾಮಾಜಿಕ ಬಹಿಷ್ಕಾರ ತಡೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ