ಅಮರಾವತಿ: ತಿರುಪತಿಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಿರುಪತಿಯ ಚಂದ್ರಗಿರಿ ಮಂಡಲದ ನೇಂಡ್ರಗುಂಟನಲ್ಲಿ ನಡೆದಿದೆ.
ಮೃತ ಮಹಿಳೆಯರಲ್ಲಿ ಇಬ್ಬರು ಕರ್ನಾಟಕದ ನಂಗಿಲಿ ಪ್ರದೇಶವದವರೆಂದು ಗುರುತಿಸಲಾಗಿದೆ. ಇನ್ನೋರ್ವ ಮಹಿಳೆ ಬಂಗಾರುಪಾಲೆಂನ ನಿವಾಸಿಯಾಗಿದ್ದಾರೆ. ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಅತಘಾದಲ್ಲಿ ಈ ಮೂವರು ಸಾವನ್ನಪ್ಪಿದ್ದಾರೆ.
ಮೂವರು ಮಹಿಳೆಯರು ತಿರುಮಲ ವೆಂಕಟೇಶ್ವರನ ದರ್ಶನ ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮೃತ ದುರ್ದೈವಿಗಳು ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಈ ಮಹಿಳೆಯರಿದ್ದ ಕಾರು ನುಜ್ಜುಗುಜ್ಜಾಗಿದ್ದು, ಬೆಂಗಳೂರು ಮೂಲದ ನಂಬರಿನ ಕಾರು ಎಂಬುದು ತಿಳಿದು ಬಂದಿದೆ.
Laxmi News 24×7