Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್ ಕರ್ನಾಟಕ ರಾಜ್ಯಕ್ಕೆ ಸಿಹಿ ಸುದ್ದಿಯೊಂದು ನೀಡಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ತನ್ನ ಮೂರನೇ ಪ್ರಮುಖ ರಿಟೇಲ್ ಮಳಿಗೆಯನ್ನು ತೆರೆಯಲು ಆಪಲ್ ಸಜ್ಜಾಗಿದೆ. ಇದಕ್ಕೂ ಮೊದಲು ಆಪಲ್ ಮುಂಬೈನಲ್ಲಿ ಆಪಲ್ ಬಿಕೆಸಿ ಮತ್ತು ನವದೆಹಲಿಯಲ್ಲಿ ಆಪಲ್ ಸಾಕೆಟ್ ಶಾಪ್ಗಳನ್ನು ಯಶಸ್ವಿಯಾಗಿ ತೆರೆದಿದೆ.
ಆಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಪ್ರಕಾರ, ಆಪಲ್ ಹೆಬ್ಬಾಳ ಅಂಗಡಿ ಸೆಪ್ಟೆಂಬರ್ರಂದು ತೆರೆಯಲಿದೆ. ಅಂಗಡಿಯ ಉದ್ಘಾಟನೆ ಆಚರಿಸಲು ಆಪಲ್ ಫ್ರೀ ಬೆಂಗಳೂರು-ಪ್ರೇರಿತ ವಾಲ್‌ಪೇಪರ್ ಮತ್ತು ಆಪಲ್ ಮ್ಯೂಸಿಕ್‌ನಲ್ಲಿ ವಿಶೇಷವಾಗಿ ಸಂಗ್ರಹಿಸಲಾದ ಆಪಲ್ ಹೆಬ್ಬಾಳ ಪ್ಲೇಲಿಸ್ಟ್ ಅನ್ನು ಪರಿಚಯಿಸಿದೆ.
ಆಪಲ್ ಶಾಪ್ ಸ್ಥಳ ಮತ್ತು ಉದ್ಘಾಟನೆ ದಿನಾಂಕ: ಆಪಲ್‌ನ ಮುಂಬರುವ ರಿಟೇಲ್ ಶಾಪ್ ಎಫ್ -39 ರಿಂದ ಎಫ್ – 43, ಫೀನಿಕ್ಸ್ ಮಾಲ್ ಆಫ್ ಏಷ್ಯಾ, ಬಳ್ಳಾರಿ ರಸ್ತೆ, ಬ್ಯಾಟರಾಯನಪುರ, ಬೆಂಗಳೂರು, ಕರ್ನಾಟಕ, 560092 ನಲ್ಲಿ ಇರುತ್ತದೆ. ಆಪಲ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಪ್ರಕಾರ, ಔಟ್‌ಲೆಟ್ ಸೆಪ್ಟೆಂಬರ್ 2, 2025 ರಿಂದ ಗ್ರಾಹಕರನ್ನು ಸ್ವಾಗತಿಸುತ್ತದೆ. ಭಾರತದಲ್ಲಿ ಆಪಲ್‌ನ ಇತರ ಪ್ರೀಮಿಯಂ ಔಟ್‌ಲೆಟ್‌ಗಳಂತೆ ಆಪಲ್ ಹೆಬ್ಬಾಳವು ಹಲವಾರು ಸೇವೆಗಳು ಮತ್ತು ಅನುಭವಗಳನ್ನು ನೀಡುತ್ತದೆ ಎಂದು ಉಲ್ಲೇಖಿಸಿದೆ.
ತರಬೇತಿ ಪಡೆದ ಆಪಲ್ ತಜ್ಞರು ಗ್ರಾಹಕರಿಗೆ ಸರಿಯಾದ ಸಾಧನಗಳು ಮತ್ತು ಟೂಲ್ಸ್ ಅನ್ನು ಆಯ್ಕೆಮಾಡುವಲ್ಲಿ ಮಾರ್ಗದರ್ಶನ ನೀಡುತ್ತಾರೆ. ಮೀಸಲಾದ ‘ಟುಡೇ ಅಟ್ ಆಪಲ್’ ವಲಯದಲ್ಲಿ ಸಂದರ್ಶಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಸೃಜನಶೀಲ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಾರ್ಯಾಗಾರಗಳಲ್ಲಿ ಭಾಗವಹಿಸಬಹುದು.
ಜೀನಿಯಸ್ ಬಾರ್ ಹೆಲ್ಪ್, ಪ್ರೊಡಕ್ಟ್ ಡಯಾಗ್ನಾಸ್ಟಿಕ್, ರಿಪೇರಿ ಮತ್ತು ಟೆಕ್ನಿಕಲ್ ಸಪೋರ್ಟ್ ಲಭ್ಯ ಇರುತ್ತದೆ. ಆಪಲ್ ಇಂಡಿಯಾ ವೆಬ್‌ಸೈಟ್ ಮೂಲಕ ಆನ್‌ಲೈನ್ ಆರ್ಡರ್‌ಗಳಿಗಾಗಿ ಅನುಕೂಲಕರ ಡೆಲಿವರಿ ಮತ್ತು ಅಂಗಡಿಯಲ್ಲಿ ಪಿಕಪ್ ಆಯ್ಕೆಗಳು ಸಹ ಇರುತ್ತವೆ.
ಐಫೋನ್ 17 ಸೀರಿಸ್ ಬಿಡುಗಡೆ: ಆಪಲ್ ಮುಂದಿನ ತಿಂಗಳು ಐಫೋನ್ 17 ಸೀರಿಸ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಸೆಪ್ಟೆಂಬರ್‌ನಲ್ಲಿ ನಡೆಯುವ ದೊಡ್ಡ ಕಾರ್ಯಕ್ರಮದ ಸಂದರ್ಭದಲ್ಲಿ ಕಂಪನಿಯು ತನ್ನ ಹೊಸ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಲಿದೆ. ಈ ಮುಂಬರುವ ಸೀರಿಸ್ ನಾಲ್ಕು ಮಾದರಿಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸ್ಟ್ಯಾಂಡರ್ಡ್ ಐಫೋನ್ 17, ಸ್ಲಿಮ್ ಐಫೋನ್ 17 ಏರ್, ಹೈ ಪರ್ಫಾರ್ಮೆನ್ಸ್ ಐಫೋನ್ 17 ಪ್ರೊ ಮತ್ತು ಫ್ಲ್ಯಾಗ್‌ಶಿಪ್ ಐಫೋನ್ 17 ಪ್ರೊ ಮ್ಯಾಕ್ಸ್ ಹೊಂದಿರುವ ಸಾಧ್ಯತೆಯಿದೆ.