ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!
ದೇಶದಲ್ಲಿನ ಎಲ್ಲಾ ರಾಜ್ಯಗಳಿಗೂ ಹೊಲಿಸಿದರೆ ನಮ್ಮ ಕರ್ನಾಟಕ ರಾಜ್ಯ ಶಾಂತಿ, ಸುವ್ಯಸ್ಥೆಯಿಂದ ಇರುವುದು. ಇದಕ್ಕೆಲ್ಲ ಕಾರಣ ದಿವಗಂತ ದೇವರಾಜ್ ಅರಸ ಅವರು ಎಂದು ಸಹಾಯಕ ಪೊಲೀಸ್ ಆಯುಕ್ತ ಸದಾಶಿವ ಕಟ್ಟಿಮನಿ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನದ ಅಂಗವಾಗಿ ಎರ್ಪಡಿಸಿದ್ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹುಣ್ಣಿಮ್ಮೆ ರಾತ್ರಿ ನಕ್ಷತ್ರಗಳ ಮಧ್ಯೆ ಹೊಳೆಯುವ ಚಂದ್ರನಂತೆ ವ್ಯಕ್ತಿತ್ವವನ್ನು ಅರಸು ಅವರು ಹೊಂದಿದ್ದರು. ಹಿಂದುಳಿದ ವಗರ್ಗಳ ಕಲ್ಯಾಣಕ್ಕೆ ಅರಸು ಅವರು ಕೊಡುಗೆ ಅಪಾರವಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಸಮಾಜದಲ್ಲಿ ಉನ್ನತ ಸ್ಥಾನಗಳಿಗೆ ಹಿಂದುಳಿದವರು ಬಂದಿರುವುದಕ್ಕೆ ದೇವರಾಜ ಅರಸು ಅವರು ಕಾರಣರಾಗಿದ್ದಾರೆ. ಉಳ್ಳುವವ ಒಡೆಯ ಕಾನೂನು ಜಾರಿ, ಜೀತಪದ್ದತಿ ನಿರ್ಮೋಲನೆ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಮಾಡಿದ್ದಾರೆ ಎಂದರು.(ಬೈಟ್…
ನಾಗೇಶ ನಾಯಕ ಮಾತಾನಾಡಿ, ದೇವರಾಜ ಅರಸು ಅರವರನ್ನು ಬಡವರ ಬದುಕಿನ ಆಶಾ ಕಿರಣ ಎಂದು ಕರೆಯಲಾಗತ್ತದೆ. ಅರಸು ಅರವರು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಪ್ರಾರಂಭಿಸಿ, ವಿದ್ಯಾರ್ಥಿಗಳ ನಿಲಯಗಳ ನಿರ್ಮಾಣ, ಶಿಷ್ಯವೇತನ, ಬಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿನ್ನು ಜಾರಿಗೆ ತಂದಿದ್ದಾರೆ. ಹಿಂದುಳಿದ ವರ್ಗದ ಹಾಸ್ಟೇಲ್ ಗಳು ಇಂದಿನ ದಿನಗಳಲ್ಲಿ ಅತಿ ಹೆಚ್ಚು ಪ್ರಗತಿಯನ್ನು ಹೊಂದಿವೆ. 1973 ರಲ್ಲಿ ನಿರುದ್ಯೋಗಿಗಳಿಗೆ 51 ರೂಪಾತಿ ಸೈಪಂಡ್ ಹಣವನ್ನು ನೀಡಿದ್ದಾರೆ ಎಂದರು.(ಬೈಟ್..
ಸಾಧನೆ ಗೈದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನ್ನಕೇರಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಮನಗೌಡಾ ಕನ್ನೋಳಿ, ಎಸ್.ಹರ್ಷಾ, ಬಂಗಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿದ್ದರು.