ಹೆಗಲ ಮೇಲೆ ತಾಯಿ ಹೊತ್ತುಕೊಂಡು 220 ಕಿಮೀ ಪಾದಯಾತ್ರೆ ಮೂಲಕ ವಿಠ್ಠಲನ ದರ್ಶನ ಮಾಡಿಸಿದ ಮಗ
55 ವರ್ಷದ ಮಗನೊಬ್ಬ ತನ್ನ ಹೆತ್ತವಳನ್ನು 220 ಕಿಮೀ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ತಾಯಿಗೆ ದೇವರ ದರ್ಶನ ಮಾಡಿಸುವ ಮೂಲಕ ಆಧುನಿಕ ಶ್ರವಣಕುಮಾರ ಎಂಬ ಬಿರುದಿಗೆ ಖ್ಯಾತನಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಇಂತಹ ಘಟನೆ ನಡೆದಿರುವುದು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದಲ್ಲಿ, ತನ್ನ ಹೆತ್ತಮ್ಮಳನ್ನು ಫಂಡರಪುರಕ್ಕೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ವಿಠ್ಠಲನ ದರ್ಶನವನ್ನು ಪುತ್ರ ಸದಾಶಿವ ಬಾನೆ ಮಾಡಿಸುವ ಮೂಲಕ ಹೆಮ್ಮೆ ಮಗನೆಂಬ ಖ್ಯಾತಿ ಪಡೆದಿದ್ದಾನೆ.

ಶತಾಯುಷಿ ತಾಯಿ ವಿಮಂತರ ಸತ್ಯವ್ವ ಲಕ್ಷ್ಮಣ ಬಾನೆ(100) ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ವಿಠ್ಠಲ ಪಾಂಡುರಂಗನ ದರ್ಶನ ಮಾಡಿಸಿದ್ದಾನೆ.

ಸದಾಶಿವ ಲಕ್ಷ್ಮಣ ಬಾನೆ ಮಹಾರಾಜರು ತಮ್ಮ ತಾಯಿಯನ್ನು ಹೆಗಲ ಮೇಲೆ ಹೊತ್ತೊಕೊಂಡು ಭಕ್ತಿ ಪರಕಾಷ್ಟೆ
ಮೆರೆದಿದ್ದಾರೆ.

ಇಂತಹ ಮಳೆಗಾದಲ್ಲಿ ಕೂಡ ಕುಗ್ಗದೆ ತನ್ನ ತಾಯಿಯನ್ನು ಪಂಡರಪುರ ದಿಂಡಿ ಪಾದಯಾತ್ರೆ ಮೂಲಕ 9 ದಿನಗಳ ಕಾಲ ಪಾದಯಾತ್ರೆಯಲ್ಲಿ ತಾನೊಬ್ಬನೆ ಹೆಗಲ ಮೇಲೆ ಕರೆದುಕೊಂಡು ಹೋಗಿ ತನ್ನ ತಾಯಿಗೆ ವಿಠ್ಠಲನ ದರ್ಶನ ಮಾಡಿಸಿದ್ದಾರೆ.

ಸದಾಶಿವ ಅವರು ಪಂಡರಪುರ ವಿಠ್ಠಲನ ಭಕ್ತರಾಗಿದ್ದಾರೆ. ಅಲ್ಲದೆ ಅವರು 15 ವರ್ಷಗಳಿಂದ ಪಂಡರಪುರಕ್ಕೆ ತೆರಳುತ್ತಾರೆ. ಶತಾಯಷಿ ತಮ್ಮ ತಾಯಿಯನ್ನು ಜೀವನದಲ್ಲಿ ಒಮ್ಮೆಯಾದರೂ
ಪಂಡರಪುರ ದಿಂಡಿ ಪಾದಯಾತ್ರೆ ಮೂಲಕ ಹೆಗಲ ಮೇಲೆ ಹೊತ್ತುಕೊಂಡು ವಿಠ್ಠಲನ ದರ್ಶನ ಮಾಡಬೇಕೆಂಬ ಮಹದಾಶೆ ಹೊಂದಿದ್ದರು.

ಪುತ್ರ ಸದಾಶಿವ ಲಕ್ಷ್ಮಣ ಬಾನೆ ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ವಿಶ್ವಲ ದರ್ಶನ ಮಾಡಿಸಿದ್ದಾನೆ. ವಿಠ್ಠಲನ ದರ್ಶನ ಮಾಡಿಸಿರುವುದು ನನ್ನ ಜೀವನ ಪಾವನವಾಗಿದೆ. ಆಷಾಢ ಏಕಾದಶಿಯಂದು ಇಲ್ಲಿನ ಗ್ರಾಮಸ್ಥರ ಜೊತೆ ತೆರಳಿ ನನಗೆ ವಿಠ್ಠಲನ ದರ್ಶನ ಮಾಡಿಸಿದ್ದಾನೆ. ಆತನಿಗೆ ದೇವರು ಚೆನ್ನಾಗಿ ಇಟ್ಟಿರಲಿ ತಾಯಿ ಸತ್ಯವ್ವ ಬಾನೆ ಹಾರೈಸಿದ್ದಾಳೆ.
