Breaking News

2019ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದಿಂದ ಸೋಲಾಗಿದೆ ಎಂಬ ರಾಜ್ಯಸಭೆಯ ಸದಸ್ಯರು, ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ಕಲಬುರಗಿ ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿ

Spread the love

2019ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನದಿಂದ ಸೋಲಾಗಿದೆ ಎಂಬ ರಾಜ್ಯಸಭೆಯ ಸದಸ್ಯರು, ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿ ಕಲಬುರಗಿ ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಾಯಿತು.

2024ರಲ್ಲಿ ಭಾರತೀಯ ಜನತಾ ಪಕ್ಷವೂ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದು, ಅದನ್ನು ಜನಾದೇಶವೆಂದು ಸ್ವೀಕರಿಸಲಾಗಿದೆ. ಆದರೆ 2019ರಲ್ಲಿ ಜನ ವಿರೋಧಿ ನೀತಿಯಿಂದ ಸೋಲನ್ನು ಅನುಭವಿಸಿ ಅದನ್ನು ಮತಗಳ್ಳತನ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆ ಖಂಡಿಸಲಾಯಿತು. ಹಾಗಾದರೆ 2024ರ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು, ಮತಗಳ್ಳತನವೇ ಎಂದು ಪ್ರಶ್ನಿಸಲಾಯಿತು. ಕಲಬುರಗಿ ಗ್ರಾಮೀಣ ಕ್ಷೇತ್ರದ ಮಡಕಿ ಗ್ರಾಮದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇಲ್ಲದ ಸುಮಾರು 70 ಅಲ್ಪಸಂಖ್ಯಾತ ಮತದಾರರು ಒಂದೇ ವರ್ಷದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೇಗೆ ಬಂದರು ಎಂಬುದು ಪ್ರಶ್ನಿಸಲಾಯಿತು.

ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಅಶೋಕ ಬಗಲಿ, ಚಂದು ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಅವ್ವಣ್ಣ ಮ್ಯಾಕೇರಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

#ಬಸವರಾಜಮತ್ತಿಮಡು #BasavarajMattimadu #ಕಲಬುರಗಿಗ್ರಾಮೀಣ

 


Spread the love

About Laxminews 24x7

Check Also

ಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ ರೂಪಾಯಿ ಮೀಸಲು- ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the loveಬೆಮುಲ್ ಗೆ ಬಂದ 13 ಕೋಟಿ ರೂಪಾಯಿ ಲಾಭದಲ್ಲಿ ಹೈನುಗಾರ ರೈತರಿಗೆ ವಿವಿಧ ಸೌಲಭ್ಯಗಳಿಗಾಗಿ 10 ಕೋಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ