ಮಾದಕ ವಸ್ತು ಸೇವನೆ; ಮಟಕಾ ಆಟ…
ನಾಲ್ವರ ವಿರುದ್ಧ ಕ್ರಮಕೈಗೊಂಡ ಬೆಳಗಾವಿ ಪೊಲೀಸರು…
ಮಾದಕ ವಸ್ತು ಸೇವಿಸಿ ಅಸಹಜ ವರ್ತನೆ ಮತ್ತು ಮಟಕಾ ಆಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದು, 1740 ರೂಪಾಯಿ ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


ಬೆಳಗಾವಿಯ ಮಹಾದ್ವಾರ ರಸ್ತೆಯ ಸಂಭಾಜೀ ಉದ್ಯಾನದ ಹತ್ತಿರ ಅಸಹಜವಾಗಿ ವರ್ತಿಸುತ್ತಿದ್ದ ಸಂತೋಸ್ ಲೋಹಾರ್ ಮತ್ತು ನವಜ್ಯೋತ್ ಭಾಟಿಯಾರನ್ನು ಮಾರ್ಕೇಟ್ ಪಿ ಎಸ್ ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.
ಇನ್ನು ಬೆಳಗಾವಿ ಸಮರ್ಥ ನಗರದ 2ನೇ ಕ್ರಾಸನಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಸಿದ್ಧಾರ್ಥ ಪಾಟೀಲನ್ನನ್ನು ಮಾರ್ಕೇಟ್ ಪಿ ಎಸ್ ಐ ವಿಠ್ಠಲ ಹಾವನ್ನವರ ನೇತೃತ್ವದಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಮಾದಕ ವಸ್ತು ಸೇವಿಸಿರುವುದು ಬೆಳಕಿಗೆ ಬಂದಿದೆ. ಇವರ ವಿರುದ್ದ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಲಾಗಿದೆ.
ಅದೇ ರಿಈತಿ ಬೆಳಗಾವಿ ಮಚ್ಛೆ ಇಂಡಸ್ಟ್ರೀಯಲ್ ಏರಿಯಾದಲ್ಲಿ ಮಟಕಾ ಆಟವಾಡುತ್ತಿದ್ದಾಗ ಜಾನ್ ಥಾಮಸ್ ಕಲಘಟಗಿಯನ್ನು ಬೆಳಗಾವಿ ಗ್ರಾಮೀನ ಪಿ ಎಸ್ ಐ ನಾಗನಗೌಡ ಕಟ್ಟಿಮನಿಗೌಡ್ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿ 1740 ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬೆಳಗಾವಿ ಪೊಲೀಸರ ಈ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಮತ್ತು ಉಪಾಯುಕ್ತರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.