ಉಡುಪಿ: ಕೊರೊನಾದಿಂದ ಸಾವನ್ನಪ್ಪಿದ ದಾವಣಗೆರೆ ಮೂದಲ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಉಡುಪಿಯಲ್ಲಿ ಖಬರಸ್ತಾನ್ ನಲ್ಲಿ ಪಿಎಫ್‍ಐ ಯುವಕರ ತಂಡ ನಡೆಸಿದೆ.
ದಾವಣಗೆರೆ ಮೂಲದ ವ್ಯಕ್ತಿ ಉಡುಪಿಯಲ್ಲಿ ಮೃತಪಟ್ಟಿದ್ದು ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ 72 ವರ್ಷದ ವೃದ್ಧ ಮಣಿಪಾಲ ಕೆಎಂಸಿಗೆ ಭೇಟಿ ಕೊಟ್ಟಿದ್ದರು. ಚಿಕಿತ್ಸಾ ಸಂದರ್ಭ ಅವರಲ್ಲಿ ಕೊರೊನಾದ ಲಕ್ಷಣಗಳು ಕಂಡು ಬಂದಿತ್ತು.
ರೋಗಿಯನ್ನು ಕೂಡಲೇ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ವ್ಯಕ್ತಿಯನ್ನು ಶಿಫ್ಟ್ ಮಾಡಲಾಗಿತ್ತು. ಉಸಿರಾಟದ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ಸಂದರ್ಭ ಗಂಟಲ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಕೊರೊನಾ ಟೆಸ್ಟಿಂಗ್ ರಿಪೋರ್ಟ್ ವೈದ್ಯರ ಕೈ ಸೇರಿದ್ದು, ಮೃತ ವ್ಯಕ್ತಿಗೆ ಕೊರೊನಾ ತಗುಲಿರೋದು ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ದಾವಣಗೆರೆಗೆ ಮೃತದೇಹ ಕಳುಹಿಸುವ ಬದಲು ಉಡುಪಿಯಲ್ಲೇ ಮೃತನ ಅಂತ್ಯಸಂಸ್ಕಾರವನ್ನು ಸರ್ಕಾರದ ನಿಯಮದಂತೆ ಮಾಡಲಾಯಿತು. ಉಡುಪಿಯ ಪಿಎಫ್‍ಐ ಸಂಘಟನೆಯ ಹತ್ತು ಮಂದಿ ಯುವಕರ ತಂಡ ಅಂತ್ಯಸಂಸ್ಕಾರ ನಡೆಸಿದೆ. ಸರ್ಕಾರದ ಸೂಚನೆಯಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಂಡು ಯುವಕರು ಖಬರ್ ಸ್ತಾನ್ ನಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
https://youtu.be/I1U-UG-NHuk