ಮುಂಬೈ, ಜುಲೈ.12- ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು ತಗುಲಿದೆ. ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ರೇಖಾ ನಿವಾಸದ ಹೊರಗೆ ಹಾಕಿರುವ ನೊಟೀಸ್ ಹಾಕಿ ಸ್ಥಳೀಯರ ಗಮನಕ್ಕೆ ತರಲಾಗಿದೆ.
ರೇಖಾ ಅವರ ನಿವಾಸ ಸೇರಿದಂತೆ ಇಡೀ ಪ್ರದೇಶವನ್ನು ಸ್ಯಾನಿತೈಸ್ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ. ಅವರನ್ನು ಪರೀಕ್ಷೆ ಒಳಪಡಿಸಲು ಸೂಚಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ.
ರೇಖಾ ಅವರ ಮನೆಯಲ್ಲಿ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳಿದ್ದು, ಅವರು ಯಾವಾಗಲೂ ಜೊತೆ ಇರುತ್ತಿದ್ದರು. ಅವರಿಗೂ ಸೋಂಕು ತಂಗುಲಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.