ಬೆಂಗಳೂರು, ಜ.03: ಕಳೆದೊಂದು ವರ್ಷದಿಂದ ಶಿಕ್ಷಣ ಇಲಾಖೆ (Karnataka Education Department) ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಐದು ಎಂಟು ಹಾಗು 9ನೇ ತರಗತಿಗೆ ಪಬ್ಲಿಕ್ ಮಾದರಿಯಮೌಲ್ಯಾಂಕನ ಎಕ್ಸಾಂನಡೆಸಲು ಮುಂದಾಗಿದೆ. ಆದರೆ ಈ ಪರೀಕ್ಷೆ ಈಗ ಪ್ರತಿಷ್ಠೆಯ ಕಣವಾಗಿದ್ದು ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಠಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನೂ ಶಿಕ್ಷಣ ಇಲಾಖೆಯ ಮೌಲ್ಯಾಂಕನ ಪರೀಕ್ಷೆಗಳ ಹಠದಲ್ಲಿ ಖಾಸಗಿ ಶಾಲೆಗಳು ಹೊಸ ಲಾಭಿ ಶುರು ಮಾಡಿಕೊಂಡಿರುವ ಆರೋಪ ಕೇಳಿ ಬರ್ತಿದೆ.
ಶಿಕ್ಷಣ ಇಲಾಖೆ ಕಳೆದ ವರ್ಷ ಹಠಕ್ಕೆ ಬಿದ್ದಂತೆ 5 ಹಾಗೂ 8 ನೇ ತರಗತಿಗೆ ಬೋರ್ಡ್ ಮಾದರಿಯ ಎಕ್ಸಂ ನಡೆಸಿತ್ತು. ಈಗ 9 ಹಾಗೂ 11 ಕ್ಕೂ ಪರಿಕ್ಷೆ ನಡೆಸಲು ಮುಂದಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಸಗಿ ಶಾಲೆಗಳ ಒಕ್ಕೂಟ ಹೊಸ ವರಸೆ ಶುರುಮಾಡಿದೆ. ಮತ್ತೆ ಶಾಲಾ ಮಟ್ಟದಲ್ಲಿ ಪಾಸ್ ಫೇಲ್ ಫೈಟ್ ಶುರುವಾಗಿದೆ. ಶಿಕ್ಷಣ ಇಲಾಖೆ 5, 8,9, ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಯಾವುದೇ ವಿದ್ಯಾರ್ಥಿಯನ್ನ ಅನುತೀರ್ಣ ಮಾಡದೆ ಮೌಲ್ಯಾಂಕನ ಮಾದರಿಯ ಪಬ್ಲಿಕ್ ಮಾದರಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ಮೌಲ್ಯಂಕನ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಕೂಡಾ ಪ್ರಕಟಿಸಿದೆ. ಜೊತೆಗೆ ಈ ಪರೀಕ್ಷೆಯಲ್ಲಿ ಫೇಲ್ ಮಾಡದೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಶಿಕ್ಷಣ ಇಲಾಖೆ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ ಶುರು ಮಾಡಿಕೊಂಡು ಹೊಸ ವರಸೆ ಶುರು ಮಾಡಿವೆ.