Breaking News

(ಆರ್‌ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ:ಸಚಿವ ರಮೇಶ ಜಾರಕಿಹೊಳಿ

Spread the love

ಗೋಕಾಕ : ರಾಷ್ತ್ರೀಯ ಸ್ವಯಂ ಸೇವಕ ಸಂಘ(ಆರ್‌ ಎಸ್ ಎಸ್) , ಬಿಜೆಪಿ ಪಕ್ಷ ತತ್ವ ಸಿದ್ದಾಂತಗಳು ಮುಸ್ಲೀಂ ವಿರೋಧಿಯಲ್ಲ, ದೇಶಕ್ಕೆ ದ್ರೋಹ ಬಗೆಯುವವರಿಗೆ ಮಾತ್ರ ನಮ್ಮ ಪಕ್ಷ ವಿರೋಧ ಮಾಡುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಸೇರ್ಪಡೆಗೊಂಡ ವೇಳೆ ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಬಿಜೆಪಿ ಪಕ್ಷದಲ್ಲಿ ರಮೇಶ್ ಇರಲು ಸಾಧ್ಯವಿಲ್ಲ ಎಂಬ ಮಾತುಗಳನ್ನು ಆಡಿದ್ದರು. ಆದರೆ ಈಗ  ಅದೇ ನಾಯಕರು ರಮೇಶ ಇಷ್ಟೋಂದು ಶಾಂತ ಸ್ವಭಾವ ಹೊಂದಿದ್ದಾನೆ ಎಂದು ಬಾಯಿ ಮೇಲೆ ಕೈ ಇಡುವಂತಾಗಿದೆ.

ರಮೇಶ ಜಾರಕಿಹೊಳಿ ಮಾನಸಿಕವಾಗಿ ಸಂಪೂರ್ಣ ಬಿಜೆಪಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.  ಇದಕ್ಕೆಲ್ಲಾ ಬಾಲ್ಯದ ದಿನಗಳಲ್ಲಿ  ಆರ್ ಆರ್ ಎಸ್ ರಾಷ್ಟ್ರ ಸಂರಕ್ಷಣೆಗೆ ದನಿ ಎತ್ತಿರುವುದು ಎಂದು ಹೇಳಿದರು.

ಮೊದಲು ಕಾಂಗ್ರೆಸ್ ಪಕ್ಷದಲ್ಲಿ ಇರುವ ಸಂದರ್ಭದಲ್ಲಿ ಚುನಾವಣೆಯಲ್ಲಿ ಶಿಸ್ತು ಬದ್ದವಾಗಿ ಚುನಾವಣೆಯನ್ನು ಎದುರಿಸುತ್ತಿರಲಿಲ್ಲ. ಆದರೆ ಬಿಜೆಪಿ ಪಕ್ಷದಲ್ಲಿ ಹಾಗಿಲ್ಲ. ನಾನು ಸಹ ಶಿಸ್ತು ಬದ್ಧ ಪಕ್ಷದಲ್ಲಿ ಇದ್ದೇನೆ. ಮುಂದೆಯೂ ಶಿಸ್ತು ಬದ್ಧವಾಗಿಯೇ ನಾವೇಲ್ಲರೂ ಮುನ್ನಡೆಯೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ