Breaking News

ಏಕದಂತನಿಗೆ ಭಕ್ತರು ಸಂಭ್ರಮದಿಂದ ವಿಸರ್ಜನೆ

Spread the love

ವಿಜಯಪುರ.. ಕಳೆದ ಐದು ದಿನಗಳಿಂದ ಮನಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಐದನೇ ದಿನದ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಿ, ಪೂಜಿಸಿದ ಏಕದಂತನಿಗೆ ಭಕ್ತರು ಸಂಭ್ರಮದಿಂದ ವಿಸರ್ಜನೆ ಮಾಡಿದರು.

ವಿಜಯಪುರ ನಗರದ ತಾಜ್ ಬೌಡಿ ಸೇರಿದಂತೆ ಮಹಾನಗರ ಪಾಲಿಕೆ ನಿರ್ಮಿಸಿದ್ದ ಕೃತಕ ಹೊಂಡಗಳಲ್ಲಿ ವಿಸರ್ಜಿಸಿದರು. ಹಲವೆಡೆ ಡಿಜೆ ಸೌಂಡ್ ಗೆ ಯುವಕ ಯುವತಿಯರು ಸಖತ್ ಸ್ಟೆಪ್ ಹಾಕಿ ಗಣಪತಿ ಬಪ್ಪಾ ಮೋರಯಾ…’

ಎನ್ನುವ ಜೈಕಾರ ಹಾಕಿದರು. ಮೆರವಣಿಗೆ ಮೂಲಕ ಗಣೇಶನನ್ನು ವಿಸರ್ಜನಾ ಸ್ಥಳಕ್ಕೆ ಕರೆತಂದ ಭಕ್ತರು, ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಪುಡ್ಯಚಾ ವರ್ಷಿ ಲೌಕರಿಯಾ ಎಂದು ಬಿಳ್ಕೊಟ್ಟರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು


Spread the love

About Laxminews 24x7

Check Also

ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ–ಹಳೇಗುಡಗನಟ್ಟಿ–ಯಮಕನಮರಡಿ ರಸ್ತೆಯ ಅಗಲೀಕರಣ, ಡಾಂಬರೀಕರಣ,

Spread the loveಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಂಚಿನಾಳ–ಹಳೇಗುಡಗನಟ್ಟಿ–ಯಮಕನಮರಡಿ ರಸ್ತೆಯ ಅಗಲೀಕರಣ, ಡಾಂಬರೀಕರಣ, ಪಾದಚಾರಿ ಮಾರ್ಗ (ಫುಟ್ ಪಾತ್) ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ