ಬೆಳಗಾವಿ: ಯಮನಕಮರಡಿ ವ್ಯಾಪ್ತಿಯ ಕುರಿಹಾಳ ಗ್ರಾಮದಲ್ಲಿ ಹೈಟೆಕ್ ಎಲ್ ಇಡಿ ಬೀದಿ ದೀಪಗಳನ್ನು ಉದ್ಘಾಟಿಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರ ಅನುದಾನದಲ್ಲಿ ಟಿಎಸ್ ಪಿ ಯೋಜನೆಯಡಿ ನಿರ್ಮಾಣಮಾಡಲಾದ ಬೀದಿ ದೀಪಗಳನ್ನು ಶಾಸಕರ ಆದೇಶದ ಮೇರೆಗೆ ಗ್ರಾಮದ ಮುಖಂಡರು, ಶಾಸಕರ ಆಪ್ತ ಸಹಾಯಕ ಮಲಗೌಡಾ ಪಾಟೀಲ್ ಚಾಲನೆ ನೀಡಿದರು.
ನಂತರ ಗ್ರಾಮದ ಸಮುದಾಯ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 250 ಕ್ಕೂ ಹೆಚ್ಚು ಖರ್ಚಿ ಹಾಗೂ ಸೌಂಡ್ ಸಿಸ್ಟಮ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಗ್ರಾಮದ ಹಿರಿಯ ಮುಖಂಡರು, ತಾಪಂ ಸದಸ್ಯರು, ಗ್ರಾಪಂ ಸದಸ್ಯರು ಇದ್ದರು.
Laxmi News 24×7