Breaking News

ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿ

Spread the love

ಬಾಗಲಕೋಟೆ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗೆ ಚುನಾವಣೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ ಹಲವೆಡೆ ಇದುವರೆಗೂ ನೂರಾರು ಕೋಟಿ ಹಣ ಜಪ್ತಿ ಮಾಡಿಕೊಳ್ಳಲಾಗಿದೆ.

ಅಂತೆಯೇ ಜಿಲ್ಲೆಯ ಮುಧೋಳ ಮತಕ್ಷೇತ್ರದ ಲಕ್ಷಾನಟ್ಟಿ ಚೆಕ್​ಪೋಸ್ಟ್​ ಬಳಿ ಅಧಿಕಾರಿಗಳು ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.

ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್​ಎಸ್​ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿಯು ಹಣವು ಯುನಿಯನ್ ಬ್ಯಾಂಕ್​ಗೆ ಸೇರಿದೆ ಎಂದಿದ್ದಾನೆ. ಆದರೆ ವ್ಯಕ್ತಿಯ ಹೆಸರು, ಹುದ್ದೆ ಹಾಗೂ ಚಾಲಕ, ಬ್ಯಾಂಕ್ ಟ್ಯಾಗ್ಸ್ ಹಾಗೂ ಬ್ಯಾಂಕ್ ಕೋಡ್​​ ಸೇರಿದಂತೆ ಇತರೆ ದಾಖಲೆಗಳು ಕಂಡುಬಾರದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದ ನಗದನ್ನು ಖಜಾನೆಗೆ ಜಮೆ‌ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

 ಮುಧೋಳದಲ್ಲಿ ದಾಖಲೆ ಇಲ್ಲದ 5 ಕೋಟಿ ಹಣ ಜಪ್ತಿರಾಜ್ಯಾದ್ಯಂತ ಈಗಾಗಲೇ ಚುನಾವಣೆ ಅಕ್ರಮ ಸಂಬಂಧ ಬರೋಬ್ಬರಿ 302.78 ಕೋಟಿ ರೂಪಾಯಿ ಅಕ್ರಮ ನಗದು, ಮದ್ಯ, ಉಡುಗೊರೆ ಚುನಾವಣಾ ಆಯೋಗದ ವಿವಿಧ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಶನಿವಾರ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಹೆಚ್ಚುವರಿ ಸುಮಾರು ಶೇಕಡಾ 68ಕ್ಕೂ ಅಧಿಕ ಮೊತ್ತದ ಹಣ ಜಪ್ತಿ ಆಗಿದೆ.


Spread the love

About Laxminews 24x7

Check Also

ಪಾಸ್ ಪೋರ್ಟ್​ಗೆ ಸುಳ್ಳು ದಾಖಲೆಗೆ ಸಹಕಾರ: ಪೊಲೀಸ್ ಸಿಬ್ಬಂದಿ ಬಂಧನ

Spread the love ಬಂಟ್ವಾಳ (ದಕ್ಷಿಣಕನ್ನಡ): ಪಾಸ್​ ಪೋರ್ಟ್ ಮಾಡಲು ಸುಳ್ಳು ದಾಖಲೆ ನೀಡಿದ ವ್ಯಕ್ತಿಗೆ ಸಹಕಾರ ನೀಡಿದ ಆರೋಪದಲ್ಲಿ ವಿಟ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ