Breaking News

ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ರಾಮದುರ್ಗ ಸಜ್ಜು: ಅಶೋಕ ಪಟ್ಟಣ 

Spread the love

ರಾಮದುರ್ಗ: ಸಮೀಪದ ಮುಳ್ಳೂರು ಬೆಟ್ಟದಲ್ಲಿ ಶಿವನ ಮೂರ್ತಿ ಸ್ಥಾಪನೆಯಾಗಿ 6 ವರ್ಷ ಕಳೆದಿದ್ದು, ಈ ಬಾರಿ ಫೆ.18ರಂದು ಅದ್ದೂರಿಯಾಗಿ ಮಹಾಶಿವರಾತ್ರಿ ಉತ್ಸವ ಆಚರಣೆಗೆ ಶಿವಪ್ರತಿಷ್ಠಾನ ಸೇವಾ ಸಮಿತಿ ಮುಂದಾಗಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ಸರಳವಾಗಿ ಮಹಾಶಿವರಾತ್ರಿ ಆಚರಿಸಲಾಗಿತ್ತು.

ಈ ಬಾರಿ ಕೊರೊನಾ ಕಾರ್ಮೋಡ ಸರಿದಿರುವುದರಿಂದ ಸಂಭ್ರಮ ಇಮ್ಮಡಿಗೊಂಡಿದೆ.

72 ಅಡಿ ಎತ್ತರದಲ್ಲಿರುವ ಶಿವನ ಮೂರ್ತಿ ಮತ್ತು ಅದರ ಮುಂಭಾಗದಲ್ಲಿರುವ ನಂದಿ ವಿಗ್ರಹ ದರ್ಶನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚಿನ ಭಕ್ತರು ಬರುವ ನಿರೀಕ್ಷೆ ಇದೆ. ಅವರು ಸರದಿ ಸಾಲಿನಲ್ಲಿ ನಿಂತು, ಸುಲಭವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

 

ಹಚ್ಚ ಹಸಿರಿನ ಮಧ್ಯೆ ಮೈತಳೆದ ಈ ಧಾರ್ಮಿಕ ಕ್ಷೇತ್ರದಲ್ಲೀಗ ಸಂಭ್ರಮ ಮನೆಮಾಡಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಉಪವಾಸ ಕೈಗೊಳ್ಳುವ ಮತ್ತು ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಫಲಾಹಾರದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 3 ಟನ್‌ ಖರ್ಜೂರ್‌, 3 ಕ್ವಿಂಟಲ್ ಬೇಯಿಸಿದ ಶೇಂಗಾ, 3 ಕ್ವಿಂಟಲ್‌ ಸಾಬೂದಾನಿ ಮತ್ತು 1 ಲಕ್ಷ ಬಾಳೆಹಣ್ಣು ಸಂಗ್ರಹಿಸಲಾಗಿದೆ.

ಪ್ರಸಾದ ಮತ್ತು ದರ್ಶನಕ್ಕಾಗಿ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್‌ ಅಳವಡಿಸಲಾಗಿದ್ದು, ಹೆಚ್ಚಿನ ಕೌಂಟರ್‌ ತೆರೆಯಲಾಗಿದೆ. ಮಹಾಶಿವರಾತ್ರಿ ಅಂಗವಾಗಿ ರಾತ್ರಿ ಜಾಗರಣೆ, ಆಧ್ಯಾತ್ಮಿಕ ಪ್ರವಚನ ನಡೆಯಲಿವೆ. ವಿವಿಧ ಮಹಿಳಾ ಭಜನಾ ಮಂಡಳಿಗಳು, ಪಂಡಿತ ಪುಟ್ಟರಾಜ ಸಂಗೀತ ಪಾಠಶಾಲೆ ಮತ್ತು ಸಹಜ ಸ್ಥಿತಿ ಯೋಗ ಸತ್ಸಂಗ ಬಳಗದಿಂದ ಭಜನಾ ಕಾರ್ಯಕ್ರಮ ನೆರವೇರಲಿವೆ.

‘ಪ್ರವಚನ ಆಲಿಸಲು ಬರುವ ಭಕ್ತರಿಗೂ ರಾತ್ರಿ ಶೇಂಗಾ, ಸಾಬೂದಾನಿ, ಖರ್ಜೂರ್, ಬಾಳೆಹಣ್ಣು ವಿತರಿಸಲಾಗುವುದು. ಮರುದಿನ ಭಕ್ತರಿಗೆ ಸಿಹಿ ಹುಗ್ಗಿ, ಅನ್ನ, ಸಾರು ಪ್ರಸಾದವಾಗಿ ನೀಡಲಾಗುವುದು’ ಎಂದು ಸಮಿತಿ ಅಧ್ಯಕ್ಷ ಅಶೋಕ ಪಟ್ಟಣ  ತಿಳಿಸಿದರು.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ