ಬೆಳಗಾವಿಗೆ ಆಗಮಿಸುತ್ತಿರೋ ಮಹಾರಾಷ್ಟ್ರದ ಸಚಿವರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಯಾರೇ ಕಾನೂನು ಉಲ್ಲಂಘನೆ ಮಾಡಿದರೂ ಅವರ ಮೇಲೆ ಕ್ರಮ ತಗೋತೀವಿ. ಅವರು ಸಚಿವರು ಆದರೂ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಸಿಎಂ ಅವರು ಇದರ ಬಗ್ಗೆ ಸಂಪೂರ್ಣವಾಗಿ ಹೇಳಿದ್ದಾರೆ. ನಮ್ಮ ರಾಜ್ಯ-ಮಹಾರಾಷ್ಟ್ರದ ಡಿಜಿಗಳು, ಎಡಿಜಿಪಿಗಳ ಸಭೆ ನಡೆದಿದೆ.
ಇದೀಗ ಭಾವನಾತ್ಮಕವಾಗಿ ಏನಾದರೂ ಕೆಣಕಲು ಬಂದರೆ ನಾವು ಬಿಡುವುದಿಲ್ಲ. ಈ ಬಗ್ಗೆ ಪೊಲೀಸರು ಎರಡು ಭಾಗದ ಜನರಿಗೆ ಎಚ್ಚರಿಕೆ ನೀಡಿದ್ದಾರೆಂದು ತಿಳಿಸಿದರು.ಕೋರ್ಟ್ ನಲ್ಲಿ ಪ್ರಕರಣವಿದೆ. ಹೀಗಿರುವಾಗ ಅನಾವಶ್ಯಕ ಗೊಂದಲ, ಶಾಂತಿ ಸುವ್ಯವಸ್ಥೆ ಹಾಳು ಮಾಡುವುದು ಸರಿಯಲ್ಲ.