ವಿಜಯಪುರ: ಇತ ರೀಲ್ ಬಾಹುಬಲಿ ಅಲ್ಲ, ರಿಯಲ್ ಬಾಹುಬಲಿ. 116 ಕೆ.ಜಿ ಗೋಧಿ ಮೂಟೆ ಹೊತ್ತು 9 ಕಿ.ಮೀ ನಡೆದುಕೊಂಡು ಹೋಗಿ ಸಾಹಸ ಮೆರೆದಿದ್ದಾನೆ. ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿ ಚಿಕ್ಕರೋಗಿ ಗ್ರಾಮದ ಪ್ರಕಾಶ ಬೈರವಾಡಗಿ ಈ ಸಾಧನೆ ಮಾಡಿದ ಯುವಕ.
ದೇವರಹಿಪ್ಪರಗಿ ತಾಲೂಕಿನ ಮುಳ ಸಾವಳಗಿ ಕ್ರಾಸ್ನಿಂದ ಚಿಕ್ಕರೂಗಿ ಗ್ರಾಮದವರೆಗೆ ಗೋಧಿ ಮೂಟೆ ಹೊತ್ತು ನಡೆದ ಯುವಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇವರ ಸಾಧನೆಗೆ ಸ್ನೇಹಿತರು ದಾರಿ ಉದ್ಧಕ್ಕೂ ಟವೆಲ್ನಿಂದ ಗಾಳಿ ಬೀಸಿ ಸಾಥ್ ನೀಡಿದ್ದಾರೆ. ಅಲ್ಲದೇ ಹಲಗೆ, ತಮಟೆ ಬಾರಿಸುತ್ತಾ ಹುರಿದುಂಬಿದ್ದಾರೆ. ಬಳಿಕ ಸಾಧನೆ ಮಾಡಿದ ಪ್ರಕಾಶ್ಗೆ 50 ಗ್ರಾಂ ಬೆಳ್ಳಿ ಕಡಗವನ್ನು ಆತನ ಗೆಳೆಯರು ಕೈಗೆ ಹಾಕಿದ್ದಾರೆ.
Laxmi News 24×7