Breaking News

ಕಿಸಾನ್​ ಸಮ್ಮಾನ್​ ನಿಧಿ ಫಲಾನುಭವಿ ಪಟ್ಟಿಯಲ್ಲಿ ಸಂಸದರ ಹೆಸರು: 9 ಕಂತು ಹಣ ಬಿಡುಗಡೆ

Spread the love

ಮಿರ್ಜಾಪುರ(ಉತ್ತರ ಪ್ರದೇಶ): ಸೋನಭದ್ರ ಸಂಸದ ಪಕೋರಿ ಲಾಲ್ ಕೋಲ್ ಹಾಗೂ ಪತ್ನಿ ಮತ್ತು ಅವರ ಮಗ ಛನ್ಬೆ ಶಾಸಕರಾಗಿರುವ ರಾಹುಲ್ ಪ್ರಕಾಶ್ ಕೋಲ್ (ರಾಹುಲ್ ಕೋಲ್) ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದು, ಯೋಜನೆಯ ಲಾಭ ಪಡೆಯಲು ಗುರುತನ್ನು ಮರೆಮಾಚಿರುವುದು ಕೇಂದ್ರ ಸರ್ಕಾರದ ಪರಿಶೀಲನಾ ವರದಿಯಲ್ಲಿ ಬಹಿರಂಗವಾಗಿದೆ. ಆದರೆ ಈ ಪ್ರಕರಣದ ಬಗ್ಗೆ ಪಕೋರಿ ಲಾಲ್ ಕೋಲ್ ತಮಗೇನೂ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಡಿಹಾನ್ ತೆಹಸಿಲ್‌ನ ಪತೇರಾ ಕಾಲಾ ನಿವಾಸಿಗಳಾಗಿರುವ ಸಂಸದ ಪಕೋರಿ ಲಾಲ್ ಅವರು ತಮ್ಮ ಮಗ ಮತ್ತು ಪತ್ನಿ ಪನ್ನಾ ದೇವಿ ಅವರನ್ನು 21 ಆಗಸ್ಟ್ 2019 ರಂದು ಕಿಸಾನ್ ಸಮ್ಮಾನ್ ನಿಧಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಇದುವರೆಗೆ ಯೋಜನೆಯ 9 ಕಂತುಗಳು ಪಕೋರಿ ಖಾತೆಗೆ ಬಿಡುಗಡೆಯಾಗಿದ್ದು, ಮಗನ ಖಾತೆಗೆ ಆಧಾರ್​ ನಂಬರ್​ ಅಪ್​ಡೇಟ್​ ಆಗಿರದ ಕಾರಣ ಹಣ ಬಿಡುಗಡೆಯಾಗಿರಲಿಲ್ಲ.

ಕೃಷಿ ಇಲಾಖೆಯ ಉಪನಿರ್ದೇಶಕ ಮಾತನಾಡಿ, ಶಾಸಕ ರಾಹುಲ್ ಪ್ರಕಾಶ್ ಕೋಲ್ ಖಾತೆಗೆ ಒಂದು ರುಪಾಯಿಯೂ ಹೋಗಿಲ್ಲ. ಸಂಸದರು ಹಾಗೂ ಅವರ ಪತ್ನಿ ಖಾತೆಗೆ ಹಣ ಹೋಗಿರುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪರಿಶೀಲನೆ ನಂತರ ಖಾತೆಗೆ ಹಣ ಜಮೆ ಆಗಿರುವುದು ಖಚಿತವಾದರೆ ಅದನ್ನು ಮರುಪಡೆಯಲಾಗುವುದು. ಅದರ ಜೊತೆಗೆ ಅನೇಕ ರೈತರ ಬಗ್ಗೆಯೂ ತನಿಖೆಯಾಗುತ್ತಿದೆ. ಯಾರು ಅನರ್ಹರು ಹಾಗೂ ಮರಣ ಹೊಂದಿರುವವರ ಖಾತೆಗೆ ಬರುತ್ತಿರುವ ಹಣವನ್ನು ನಿಲ್ಲಿಸಲಾಗುವುದು. ಇದರೊಂದಿಗೆ ಮರುಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ