Breaking News

ಬೈಲಹೊಂಗಲ ಪಟ್ಟಣದಲ್ಲಿ‌ ದುಷ್ಕರ್ಮಿಗಳಿಂದ ಚಿತ್ರನಟ ಶಿವರಂಜನ್ ಮೇಲೆ ಫೈರಿಂಗ್

Spread the love

ಬೆಳಗಾವಿ : ಬೈಲಹೊಂಗಲ ಪಟ್ಟಣದಲ್ಲಿ‌ ಮಂಗಳವಾರ ರಾತ್ರಿ ಬೈಕ್‌ ಮೇಲೆ ಬಂದ ದುಷ್ಕರ್ಮಿಗಳು ಚಿತ್ರ ನಟ ಶಿವರಂಜನ್ ಬೋಳಣ್ಣವರ ಅವರ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ್ದು, ಅದೃಷ್ಟವಶಾತ್ ಯಾವುದೇ ಗುಂಡು ತಗುಲಿಲ್ಲ.

ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಶಿವರಂಜನ್ ಅವರಿಗೆ ಯಾವುದೇ ಗುಂಡು ತಗುಲಿಲ್ಲ.

ಶಿವರಂಜನ್ ಅವರ ಸಹೋದರ ಸಂಬಂಧಿ ಗುಂಡು ಹಾರಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇನ್ನುವರೆಗೆ ಯಾವುದೇ ನಿಖರ ಮಾಹಿತಿ ತಿಳಿದು ಬಂದಿಲ್ಲ. ಗುಂಡು ಹಾರಿಸಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆ‌ ಹಾಕುತ್ತಿದ್ದಾರೆ. ಶಿವರಂಜನ್‌ ಅವರ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದ ಮಾರ್ಗದಲ್ಲಿಯ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆದಿದ್ದು, ಗುಂಡು ಹಾರಿಸಿ ಹೆದರಿಸಲು ಬಂದಿದ್ದರೋ ಅಥವಾ ಶಿವರಂಜನ್ ಅವರ ಕೊಲೆಗೈಯಲು ಬಂದಿದ್ದರೋ ಎಂಬುದರ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಬೈಲಹೊಂಗಲ‌ ಪಟ್ಟಣದ ಸುತ್ತಲೂ ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ಸಂಶಯಾಸ್ಪದ ವಾಹನಗಳ ತಪಾಸಣೆ ನಡೆಸಿದ್ದಾರೆ.

ಸ್ಥಳಕ್ಕೆ ಎಸ್ ಪಿ ಸಂಜೀವ ಪಾಟೀಲ, ಹೆಚ್ಚುವರಿ ಎಸ್ ಪಿ ಮಹಾಲಿಂಗ ನಂದಗಾಂವಿ, ಡಿಎಸ್ ಪಿ, ಸಿಪಿಐ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.


Spread the love

About Laxminews 24x7

Check Also

ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಮನವಿ

Spread the loveಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ