Breaking News

ಕ್ಯಾಸಿನೋ ಪಾರ್ಟಿಯಲ್ಲಿ ಸಂಜನಾ ನೃತ್ಯ – ಸಂಜನಾ ನೃತ್ಯಕ್ಕೆ ವಿಶೇಷ ಪ್ರಚಾರ

Spread the love

ಬೆಂಗಳೂರು: ನಾನು ಸಿನಿಮಾ ಈವೆಂಟ್‍ಗಾಗಿ ಶ್ರೀಲಂಕಾಕ್ಕೆ ಹೋಗಿದ್ದೆ ಅಷ್ಟೇ. ಅದು ಬಿಟ್ಟರೆ ನನಗೂ ಶ್ರೀಲಂಕಾಕ್ಕೂ ಯಾವುದೇ ನಂಟಿಲ್ಲ ಎಂದು ನಟಿ ಸಂಜನಾ ಸಿಸಿಬಿ ಪೊಲೀಸರು ಮುಂದೆ ಹೇಳುತ್ತಿದ್ದಾರೆ. ಆದರೆ ಇದೀಗ ನಟಿ ಸಂಜನಾ ಕ್ಯಾಸಿನೋದಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ

ನಟಿ ಸಂಜನಾ ಕೊಲಂಬೋದಲ್ಲಿ ‘ಆಕ್ಸಿಜನ್’ ಡ್ಯಾನ್ಸ್ ಕೂಡ ಮಾಡಿದ್ದಾರೆ. ಕೊಲಂಬೋದ ಅನೇಕ ಕ್ಯಾಸಿನೋಗಳಲ್ಲಿ ನಟಿ ಸಂಜನಾ ಡ್ಯಾನ್ಸ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್, ಜನವರಿಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ಆದರೆ ಸಂಜನಾ, ನಾನು ಸಿನಿಮಾ ಈವೆಂಟ್‍ಗಾಗಿ ಶ್ರೀಲಂಕಾಕ್ಕೆ ಹೋಗಿದ್ದೆ ಅಷ್ಟೇ. ಅದು ಬಿಟ್ಟರೆ ನನಗೂ ಶ್ರೀಲಂಕಾಕ್ಕೂ ಯಾವುದೇ ನಂಟಿಲ್ಲ ಎಂದು ಹೇಳುತ್ತಿದ್ದಾರೆ.

ಸತತ ಐದು ವರ್ಷಗಳಿಂದ ನಟಿ ಸಂಜನಾ ಕ್ಯಾಸಿನೋಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕೇವಲ ಶೇಕ್ ಫಾಜಿಲ್ ಕ್ಯಾಸಿನೋಗೆ ಮಾತ್ರವಲ್ಲದೇ ಶ್ರೀಲಂಕಾದ ಅನೇಕ ಕ್ಯಾಸಿನೋಗಳಲ್ಲಿ ಸಂಜನಾ ಡ್ಯಾನ್ಸ್ ಮಾಡಿದ್ದಾರೆ. ಕ್ಯಾಸಿನೋದಲ್ಲಿ ನಡೆದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಂಜನಾ ಫೋಟೋ ಹಾಕಿ ‘ಆಕ್ಸಿಜನ್ ನೃತ್ಯ’ ಮಾಡಲಿದ್ದಾರೆ ಎಂದು ವಿವರ ಮುದ್ರಣವಾಗಿತ್ತು.

ಕೊಲಂಬೋ ಕ್ಯಾಸಿನೋ ಪಾರ್ಟಿಯಲ್ಲಿ ನಟಿ ಸಂಜನಾ ಡ್ಯಾನ್ಸ್ ಮಾಡಿರುವ ವಿಡಿಯೋ ಲಭ್ಯವಾಗಿದೆ. ವಿಡಿಯೋದಲ್ಲಿ ಸಂಜನಾ ಶಾಂಪೇನ್ ಬಾಟಲ್ ಚಿಯರ್ಸ್ ಮಾಡಿ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೇಕ್ ಫಾಝಿಲ್ ಜೊತೆಗೆ ಟಿಕ್‍ಟಾಕ್ ವಿಡಿಯೋ ಕೂಡ ಮಾಡಿದ್ದಾರೆ. ಅಲ್ಲದೇ ಸಂಜನಾ ಕ್ಯಾಸಿಯೋ ಪಾರ್ಟಿಗೆ ಪದೇ ಪದೇ ಹೋಗಿ ಬರುತ್ತಿದ್ದರು ಎಂಬುದು ಎಂದು ತಿಳಿದುಬಂದಿದೆ. ಹೀಗಾಗಿ ಈ ಕ್ಯಾಸಿನೋ ಪಾರ್ಟಿಯೇ ಸಂಜನಾಗೆ ಮುಳುವಾಗುತ್ತಾ ಎಂಬ ಅನುಮಾನ ಮೂಡಿದೆ. ಶ್ರೀಲಂಕಾ ಅಲ್ಲದೇ ಬಾಲಿಯಲ್ಲೂ ಶೇಕ್ ಫಾಝಿಲ್ ಜೊತೆ ಗುರುತಿಸಿಕೊಂಡಿರುವ ಫೋಟೋ ಲಭ್ಯವಾಗಿದೆ.

ಸದ್ಯಕ್ಕೆ ಶೇಕ್ ಫಾಝಿಲ್ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

Spread the love ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ