Breaking News

ಕರ್ಮ ನಿಮ್ಮನ್ನ ಬಿಡಲ್ಲ- ರಿಯಾ ಬಂಧನಕ್ಕೆ ಅಂಕಿತಾ ಪ್ರತಿಕ್ರಿಯೆ

Spread the love

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯ ಬಂಧನವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಕರ್ಮ ನಿಮ್ಮ ವಿಧಿಯನ್ನ ನಿರ್ಧರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಅದೃಷ್ಟದಿಂದ ಏನು ಸಾಧಿಸಲು ಸಾಧ್ಯವಿಲ್ಲ. ಅದು ಕೇವಲ ಕ್ಷಣಿಕ. ನೀವು ಮಾಡುವ ಕೆಲಸಗಳು ನಿಮ್ಮ ಅದೃಷ್ಟವನ್ನ ಬದಲಾಯಿಸುತ್ತದೆ. ಅದುವೇ ಕರ್ಮ ಎಂದು ಬರೆದಿರುವ ಸಾಲುಗಳ ಫೋಟೋವನ್ನ ಅಂಕಿತಾ ಲೋಖಂಡೆ ಹಂಚಿಕೊಂಡಿದ್ದಾರೆ. ಮೂರು ದಿನದ ವಿಚಾರಣೆ ಬಳಿಕ ನಟಿ ರಿಯಾ ಚಕ್ರವರ್ತಿಯನ್ನ ಎನ್‍ಸಿಬಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಮೂರು ದಿನಗಳ ಹಿಂದೆ ರಿಯಾ ಸೋದರ ಶೌವಿಕ್, ಸ್ಯಾಮುಯೆಲ್ ಮಿರಂಡಾನನ್ನ ಬಂಧಿಸಲಾಗಿದೆ. ಇದೀಗ ರಿಯಾ ಡ್ರಗ್ಸ್ ಪಂಜರದಲ್ಲಿ ಸಿಲುಕಿದ್ದಾರೆ

ಇತ್ತ ರಿಯಾ ಬಂಧನದ ಸುದ್ದಿಗೆ ಸುಶಾಂತ್ ಸೋದರಿ ಕೃತಿ ಸಂತಸ ವ್ಯಕ್ತಪಡಿಸಿ, ಗುಡ್ ನ್ಯೂಸ್, ದೇವರು ನಮ್ಮ ಜೊತೆಯಲ್ಲಿದ್ದಾನೆ ಎಂದು ಬರೆದಿರುವ ವಾಟ್ಸಪ್ ಚಾಟ್ ಸ್ಕ್ರೀನ್‍ಶಾಟ್ ವೈರಲ್ ಆಗ್ತಿದೆ. ಕೃತಿ ಪ್ರತಿಕ್ರಿಯೆಗೆ ಕಮೆಂಟ್ ಮಾಡಿರುವ ಅಂಕಿತಾ ಲೋಖಂಡೆ, ದೀ (ಅಕ್ಕ) ಎಂದು ಬರೆದು ಹೃದಯದ ಎಮೋಜಿ ಹಾಕಿದ್ದಾರೆ.

ಭಾನುವಾರ ಆರು ಗಂಟೆ ಮತ್ತು ಸೋಮವಾರ ಎಂಟು ಗಂಟೆ ರಿಯಾ ಎನ್‍ಸಿಬಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇಂದು ವಿಚಾರಣೆಗೆ ಹಾಜರಾಗಿದ್ದ ವೇಳೆ ರಿಯಾರನ್ನ ಬಂಧಿಸಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಬಿಐಗೆ ವರ್ಗಾವಣೆಗೆ ಆಗುತ್ತಿದ್ದಂತೆ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದರು. ಈ ವೇಳೆ ರಿಯಾ ನಡೆಸಿದ್ದ ವಾಟ್ಸಪ್ ಚಾಟ್ ಡ್ರಗ್ಸ್ ಸೇವನೆಯ ಸುಳಿವು ನೀಡಿತ್ತು. ಸಿಬಿಐ ಡ್ರಗ್ಸ್ ಸಂಬಂಧಿಸಿದ ಪ್ರಕರಣದ ಮಾಹಿತಿಯನ್ನ ಎನ್‍ಸಿಬಿಗೆ ವರ್ಗಾಯಿಸಿತ್


Spread the love

About Laxminews 24x7

Check Also

ಬೆಂಗಳೂರು ಕಾಲ್ತುಳಿತ ಖಂಡಿಸಿ ಬನಹಟ್ಟಿಯಲ್ಲಿ ಬಿಜೆಪಿ ಪ್ರತಿಭಟನೆ

Spread the love ಬೆಂಗಳೂರು ಕಾಲ್ತುಳಿತ ಖಂಡಿಸಿ ಬನಹಟ್ಟಿಯಲ್ಲಿ ಬಿಜೆಪಿ ಪ್ರತಿಭಟನೆ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ