Breaking News

ಜಮೀನು ವಿಚಾರದಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡ ಘಟನೆ

Spread the love

ಮೈಸೂರು: ಜಮೀನು ವಿಚಾರದಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಂಜನಗೂಡು ತಾಲೂಕು ಇಮ್ಮಾವು ಗ್ರಾಮದಲ್ಲಿ ನಡೆದಿದೆ.ರಘು ಹೆಸರಿನಲ್ಲಿದ್ದ ಅರ್ಧ ಎಕರೆ ಜಮೀನನ್ನು ಚಂದ್ರಶೇಖರ್ ಉಳುಮೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಜಮೀನು ಬಿಡಿಸಿಕೊಳ್ಳಲು ರಘು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ರಘು ಪರ ತೀರ್ಪು ನೀಡಿತ್ತು. ಆದರೆ ತೆರವುಗೊಳಿಸುವ ಆದೇಶ ಇನ್ನೂ ನೀಡಿರಲಿಲ್ಲ.

ಇತ್ತ ತೀರ್ಪಿನ ಅನ್ವಯದಂತೆ ರಘು ಜಮೀನು ತೆರುವುಗೊಳಿಸುವಂತೆ ಒತ್ತಡ ಹೇರಿದ್ದ. ಹೀಗಾಗಿ ಕೆಲವು ರೈತರನ್ನ ಕರೆದುಕೊಂಡು ಹೋಗಿ ಜಮೀನು ಬಿಟ್ಟುಕೊಡುವಂತೆ ತಾಕೀತು ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೆ ಹೋಗಿ ರೈತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ