ವಿಜಯಪುರ ಜಿಲ್ಲೆಯ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಖ್ಯಾತಿ. ತಮ್ಮ ಪ್ರವಚನಾಮೃತದಿಂದ ವಿಶ್ವದೆಲ್ಲೆಡೆ ಖ್ಯಾತಿ ಹೊಂದಿದ್ದಾರೆ. ಉತ್ತರ ಕರ್ನಾಟಕದ ಆರಾಧ್ಯದೈವರು ಇತ್ತಿಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೇಗ ಗುಣಮುಖರಾಗಲೆಂದು ಮುಸ್ಲಿಂ ಬಾಂಧವರು ಬಸವನಾಡು ವಿಜಯಪುರದ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಡೆದಾಡುವ ದೇವರು ಭಕ್ತರ ಆರಾಧ್ಯ ದೈವ ಸಿದ್ದೇಶ್ವರ ಸ್ಮಾಮಿಜಿಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಮುಸ್ಲಿಂ ಬಾಂಧವರು ದರ್ಗಾದಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಿದ್ದೇಶ್ವರ ಶ್ರೀಗಳು ಯಾವುದೇ ಜಾತಿ, ಮಂತ, ಪಂಥ ಎಂದು ನೋಡದೇ ಎಲ್ಲರೂ ಸಹಿತ ಸನ್ಮಾರ್ಗದಿಂದ ಸಾಗಬೇಕು ಎಂದು ತಮ್ಮ ಪ್ರವಚನದ ಮೂಲಕ ಜನರಿಗೆ ಸಂದೇಶವನ್ನು ಸಾರಿದವರು. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
Laxmi News 24×7