ಬೆಳಗಾವಿ: ‘ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿರುಗೇಟು ನೀಡಿದರು.
‘ರಾತ್ರಿ ರಾಜಕೀಯದಿಂದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳಕರ’ ಎಂಬ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
‘ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮಾತನಾಡುತ್ತಿವೆ. ಅದು ಕ್ಷೇತ್ರದ ಜನರಿಗೂ ಗೊತ್ತಿದೆ. ಮಾಜಿ ಶಾಸಕರ ಎಲ್ಲ ಹೇಳಿಕೆಗಳಿಗೂ ಪ್ರತಿಕ್ರಿಯಿಸಲು ಬಯಸುವುದಿಲ್ಲ’ ಎಂದರು.
Laxmi News 24×7