Breaking News

ಮಗನ‌ ಅದ್ದೂರಿ‌ ಮದುವೆ‌ ಮಾಡಿದ ಬಿಜೆಪಿ ಮುಖಂಡನ ವಿರುದ್ದ ಎಫ್ ಐ ಆರ್

Spread the love

ಹುಕ್ಕೇರಿ: ಮದುವೆ ಸಮಾರಂಭಗಳಿಗೆ ಸರಕಾರ ನಿಷೇಧ ಹೇರಿದರೂ ಜನ ಮಾತ್ರ ಸಂಭಂದವಿಲ್ಲವೆನೋ ಅನ್ನೊ ಹಾಗೆ ಇದ್ದಾರೆ. ಕೊರೋನಾ ಮಾಹಾಮಾರಿ ಯಿಂದ ಜನ ಸಾವನ್ನಪ್ಪುತ್ತಿದ್ದರು ಜನ ಮಾತ್ರ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ಅದ್ದೂರಿ ಮದುವೆ ಮಾಡಿದ ಬಿಜೆಪಿ ಮುಖಂಡನಿಗೆ ಹುಕ್ಕೇರಿ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಬಿಜೆಪಿ ಮುಖಂಡನ‌ ವಿರುದ್ಧ ಪ್ರಕರಣ ದಾಖಲಿಸಿದ್ದು ಅದ್ಧೂರಿ ಮದುವೆ ಮಾಡುವ ಮುನ್ನ ಎಚ್ಚರಕೆಯಿಂದ ಇರಿ ಎನ್ನುವ ಸಂದೇಶವನ್ನ ಪೊಲೀಸರು ನೀಡಿದ್ದಾರೆ.

ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಮಗನ ಅದ್ಧೂರಿ ಮದುವೆ ಮಾಡಿದ್ದ
ಬಸ್ತವಾಡ ಗ್ರಾಮದ ಬಿಜೆಪಿ ಮುಖಂಡ ದಯಾನಂದ ‌ವಂಟಮುರಿ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ನಿನ್ನೆ ಕೊವಿಡ್-೧೯ ನಿಯಮಗಳನ್ನು ಗಾಳಿಗೆ ತೂರಿ ಮಗನ ಮದುವೆ ಮಾಡಿದ್ದ ಮುಖಂಡ ದಯಾನಂದ ವಂಟಮುರಿ ವಿರುದ್ದ ಪ್ರಕರಣ ದಾಖಲಾಗಿದ್ದು ಮಹರಾಷ್ಟ್ರದಿಂದ ಸಾಕಷ್ಟು ಜನರನ್ನ ಮದುವೆಗೆ ಕರೆಯಿಸಿ ಮದುವೆ ಜೊತೆ ಸಂಜೆ ಗ್ರಾಮದಲ್ಲಿ ವದು-ವರನ ಅದ್ಧೂರಿ ಮೆರವಣಿಗೆ ಮಾಡಿದ್ದ ಮುಖಂಡನ ವಿರುದ್ದ ಪ್ರಕರಣ ದಾಖಲಾಗಿದೆ.

500 ಕ್ಕೂ ಹೆಚ್ಚು ಜನರನ್ನು ಮದುವೆಯಲ್ಲಿ ಸೇರಿದ್ದು ಹಾಗೂ ಮಾಸ್ಕ್ ಬಳಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊವಿಡ್-೧೯ ನಿಯಮ‌ ಉಲ್ಲಂಘನೆ ಅಡಿ IPC 188, 269, 270, ಎಪಿಡೆಮಿಕ್ ಡಿಸೀಸ್ ಕಾಯ್ದೆ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಅಡಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಠಾಣೆಯ ಪಿ ಎಸ್ ಐ ಶಿವಾನಂದ ಗುಡಗನಟ್ಟಿ ಪ್ರಕರಣ ದಾಖಲಿಸಿದ್ದಾರೆ. ಹುಕ್ಕೇರಿ ತಾಲೂಕಿನ‌ ಮದಹಳ್ಳಿ ಹಾಗೂ ಹುಕ್ಕೇರಿ ಪಟ್ಟಣದಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದರು ೪ ಕಿ.ಮೀ ಅಂತರದಲ್ಲಿ ಬಸ್ತವಾಡ ಗ್ರಾಮದಲ್ಲಿ ಈ ರೀತಿ ಅದ್ದೂರಿ ಮದುವೆ ಮಾಡಿದ್ದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ