Breaking News

ಇಲ್ಲಿದೆ ರಾಜ್ಯದಲ್ಲಿ ಸಂಚಾರ ಆರಂಭಿಸಲಿರುವ ರೈಲುಗಳ ಕಂಪ್ಲೀಟ್ ಡೀಟೇಲ್ಸ್ ……….

Spread the love

ಹುಬ್ಬಳ್ಳಿ,ಮೇ21-ಕಳೆದ ಮಾರ್ಚ್ 22ರಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ರಾಜ್ಯದಲ್ಲಿ ನಾಳೆಯಿಂದ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.ಕೊರೊನಾ ವೈರಸ್ ತಡೆಯಲು ಜಾರಿಗೊಳಿಸಲಾದ ಲಾಕ್‍ಡೌನ್ ಹಿನ್ನೆಲೆಯಲ್ಲಿ , ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ ಮಾರ್ಚ್ 22ರಿಂದ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಲಾಗಿತ್ತು.

ಲಾಕ್‍ಡೌನ್ 4.0 ಮೊದಲ ದಿನವಾದ ಮೇ 18ರಂದು ಮುಖ್ಯಮಂತ್ರಿಗಳು, ಕರ್ನಾಟಕದೊಳಗೆ ಅಂತರ ಜಿಲ್ಲಾ ರೈಲುಗಳನ್ನು ಪ್ರಾರಂಭಿಸಬಹುದು ಎಂದು ಹೇಳಿದರು. ರೈಲ್ವೆ ಸಚಿವಾಲಯವು ಈ ಶಿಫಾರಸನ್ನು ಪರಿಗಣಿಸಿ ಬೆಂಗಳೂರು ಮತ್ತು ಮೈಸೂರು ನಡುವೆ ಹಾಗೂ ಬೆಂಗಳೂರು ಮತ್ತು ಬೆಳಗಾವಿ ನಡುವೆ ತಲಾ 2 ರೈಲುಗಳನ್ನು ಓಡಿಸಲು ಅನುಮೋದನೆ ನೀಡಿದೆ.

ಕರ್ನಾಟಕದಲ್ಲಿ ಶ್ರೇಣೀಕೃತ ರೀತಿಯಲ್ಲಿ ರೈಲುಗಳನ್ನು ಪುನರಾರಂಭಿಸುವಲ್ಲಿ ರೈಲ್ವೆ ರಾಜ್ಯ ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ.ನೈರುತ್ಯ ರೈಲ್ವೆ ಎರಡು ಜೋಡಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಒಂದು ಕೆಎಸ್‍ಆರ್ ಬೆಂಗಳೂರಿನಿಂದ ಬೆಳಗಾವಿ ಮತ್ತು ಇನ್ನೊಂದು ಕೆಎಸ್‍ಆರ್ ಬೆಂಗಳೂರಿನಿಂದ ಮೈಸೂರು ನಡುವೆ ಸಂಚರಿಸಲಿದೆ.

# ವಿವರ ಈ ಕೆಳಗಿನಂತಿದೆ:
# ರೈಲು ಸಂಖ್ಯೆ. 02079/02080 ಕೆಎಸ್‍ಆರ್ ಬೆಂಗಳೂರು – ಬೆಳಗಾವಿ – ಕೆಎಸ್‍ಆರ್ ಬೆಂಗಳೂರು ಟ್ರೈ ವೀಕ್ಲಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್.

# ರೈಲು ಸಂಖ್ಯೆ. 02079 ಕೆಎಸ್‍ಆರ್ ಬೆಂಗಳೂರು – ಬೆಳಗಾವಿ ಟ್ರೈ ವೀಕ್ಲಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 08:00 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟು 18:30 ಗಂಟೆಗೆ ಬೆಳಗಾವಿಗೆ ತಲುಪಲಿದೆ. ಈ ಸೇವೆಯು ನಾಳೆಯಿಂದ ಜಾರಿಗೆ ಬರಲಿದೆ .

# ರೈಲು ಸಂಖ್ಯೆ. 02080 ಬೆಳಗಾವಿ – ಕೆಎಸ್‍ಆರ್ ಬೆಂಗಳೂರು ಟ್ರೈ ವೀಕ್ಲಿ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 08:00 ಗಂಟೆಗೆ ಬೆಳಗಾವಿಯಿಂದ ಹೊರಟು 18:30 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಈ ಸೇವೆಯು ಮೇ 23 ರಿಂದ ಜಾರಿಗೆ ಬರಲಿದೆ.

# ಕೆಎಸ್‍ಆರ್ ಬೆಂಗಳೂರು – ಮೈಸೂರು – ಕೆಎಸ್‍ಆರ್ ಬೆಂಗಳೂರು 06503/06504 ಸಂಖ್ಯೆಯ ವಿಶೇಷ ರೈಲು ವಾರದಲ್ಲಿ ಆರು ದಿನಗಳಲ್ಲಿ ಸಂಚರಿಸಲಿದೆ.

# ರೈಲು ಸಂಖ್ಯೆ. 06503 ಕೆಎಸ್‍ಆರ್ ಬೆಂಗಳೂರು – ಮೈಸೂರು ವಿಶೇಷ ಗಾಡಿಯು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಕೆಎಸ್‍ಆರ್ ಬೆಂಗಳೂರಿನಿಂದ 09:20 ಗಂಟೆಗೆ ಹೊರಟು 12:45 ಗಂಟೆಗೆ ಮೈಸೂರು ತಲುಪಲಿದೆ. ಈ ಸೇವೆಯು ನಾಳೆಯಿಂದ ಜಾರಿಗೆ ಬರಲಿದೆ.

ಈ ರೈಲು ಸೇವೆಗಳ ಜೊತೆಗೆ ಕರ್ನಾಟಕದಿಂದ ಇತರ ರಾಜ್ಯಗಳಿಗೆ ಹೊರಡುವ ಶ್ರಮಿಕ್ ವಿಶೇಷ ಮತ್ತು ನವದೆಹಲಿ ಹಾಗು ಬೆಂಗಳೂರು ನಡುವಿನ ರಾಜಧಾನಿ ವಿಶೇಷ ರೈಲುಗಳು ಚಾಲನೆಯಲ್ಲಿರಲಿವೆ ಭಾನುವಾರಗಳಂದು ಕರ್ನಾಟಕದಲ್ಲಿ ಲಾಕ್‍ಡೌನ್ ಇರುವುದರಿಂದ ರೈಲುಗಳ ಸೇವೆ ಇರುವುದಿಲ್ಲ.

ಪ್ರಯಾಣಿಕರು ಮಾಸ್ಕ್ ಗಳನ್ನು ಧರಿಸುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು, ಥರ್ಮಲ್ ಸ್ಕ್ರೀನಿಂಗ್ ಇತ್ಯಾದಿಗಳಿಗಾಗಿ ನಿಲ್ದಾಣಕ್ಕೆ ಮುಂಚಿತವಾಗಿ ಬರಬೇಕು. ಎಲ್ಲಾ ಪ್ರಯಾಣಿಕರು ಐಆರ್‍ಸಿಟಿಸಿ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ